ಎರಡು ತಿಂಗಳ ಹಸುಗೂಸು ಮೃತ್ಯು

ಅಜೆಕಾರು : ಕಫದಿಂದ ಬಳಲುತ್ತಿದ್ದ ಹಸುಗೂಸೊಂದು ಮೃತಪಟ್ಟ ಘಟನೆ ಮಾ.14ರಂದು ಸಂಜೆ ವೇಳೆ ಹೆರ್ಮುಂಡೆ ಗ್ರಾಮದ ಮಾರ್ಲಿ ದರ್ಖಾಸು ಎಂಬಲ್ಲಿ ನಡೆದಿದೆ.
ಪ್ರಸನ್ನ ಎಂಬವರ ಎರಡು ತಿಂಗಳ ಮಗು ಪ್ರದ್ವಿತ್ ಮೃತ ದುದೈರ್ವಿ. ಮಾ.13ರಂದು ಮಗುವಿಗೆ ಕಫ ಜಾಸ್ತಿಯಾಗಿದ್ದರಿಂದ ಚಿಕಿತ್ಸೆಯ ಬಗ್ಗೆ ಆಸ್ವತ್ರೆಗೆ ತೋರಿಸಿದ್ದು, ಮರುದಿನ ಮಗುವಿಗೆ ಉಸಿರು ಗಟ್ಟಿದಂತೆ ಆಗಿದ್ದ ಕಾರಣ ಮಗುವನ್ನು ಆಸ್ವತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಗುವನ್ನು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story