ಮೈಸೂರು-ಬೆಂಗಳೂರು ದಶಪಥ ರಸ್ತೆಯಿಂದ ಸಂಸದ ಪ್ರತಾಪ್ ಸಿಂಹಗೆ ಕೋಟ್ಯಂತರ ರೂ. ಕಮಿಷನ್: ಎಚ್.ವಿಶ್ವನಾಥ್ ಆರೋಪ
ಮೈಸೂರು: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಕಾಮಗಾರಿಗೆ ಸಂಬಂಧಿಸಿ ಸಂಸದ ಪ್ರತಾಪಸಿಂಹ ಅವರು ಕೋಟ್ಯಂತರ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಆರೋಪಿಸಿದ್ದಾರೆ.
ನಾನು ಕಳೆದ 50 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಆದರೆ ನನ್ನ ಮನೆಯನ್ನು ನೋಡಿ, ಸಂಸದ ಪ್ರತಾಪ್ ಸಿಂಹ ಕಟ್ಟಿಸುತ್ತಿರುವ ಮನೆಯನ್ನು ನೋಡಿ. ಕೋಟಿ ಕೋಟಿ ಗಟ್ಟಲೆಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದೆಲ್ಲಾ ಹೇಗೆ ಬಂತು? ಎರಡು ಬಾರಿ ಸಂಸದ ನಾದ ತಕ್ಷಣ ಇಷ್ಟೊಂದು ಬೆಲೆ ಬಾಳುವ ಮನೆ ಕಟ್ಟಿಸಲು ಸಾಧ್ಯವೆ ಎಂದು ಹೇಳಿದರು.
ಹೆದ್ದಾರಿ ವಿಚಾರವಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಮಾರ್ಚ್ 17 ರಂದು ಸಾಂಕೇತಿಕವಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸರ್ಕಲ್ ಬಳಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.
Next Story