ಕಿನ್ಯ: ಗ್ರ್ಯಾಂಡ್ ಮಜ್ಲಿಸ್ ನ್ನೂರು ಕಾರ್ಯಕ್ರಮ

ಉಳ್ಳಾಲ: ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬ ಕಿನ್ಯ ಇದರ ಆಶ್ರಯದಲ್ಲಿ ಗ್ರ್ಯಾಂಡ್ ಮಜ್ಲಿಸ್ ನ್ನೂರು ಹಾಗೂ ಏಕದಿನ ಇಸ್ಲಾಮಿಕ್ ಕಥಾ ಪ್ರಸಂಗ ಸೋಮವಾರ ನಡೆಯಿತು.
ಸಯ್ಯದ್ ಸಫ್ವಾನ್ ತಂಙಳ್ ಎಲಿಮಲೆ, ದುಆ ನೆರವೇರಿಸಿದರು. ಕೇಂದ್ರ ಮುಶಾವರ ಸದಸ್ಯ ಬಿ, ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಧಾರ್ಮಿಕ ಉಪನ್ಯಾಸ ನೀಡಿದರು.
ಸಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿಯ ಮೆನೇಜರ್ ಹುಸೈನ್ ದಾರಿಮಿ ರೆಂಜಲಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯದ್ ಅಮೀರ್ ತಂಙಳ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.ಸಯ್ಯದ್ ಬಾತಿ ಷ ತಂಙಳ್ ಮಜ್ಲಿಸ್ ನ್ನೂರು ನ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ 2022-23 ಸಾಲಿನಲ್ಲಿ ತೇರ್ಗಡೆ ಆದ ಮಹಿಳಾ ಶರೀಯತ್ ಕಾಲೇಜು ವಿದ್ಯಾರ್ಥಿನಿ ಗಳಿಗೆ ತ್ವೈಬಾ ಸನದುದಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್ ತಂಡದಿಂದ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಿತು.
ಕಾರ್ಯಕ್ರಮ ದಲ್ಲಿ ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಅಬ್ದುಲ್ ಖಾದರ್ ಹಾಜಿ ಬೆಂಗಳೂರು, ಆಸೀಫ್ ಹಸನ್ ಹಾಜಿ, ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ರಹಿಮಾನ್ ದಾರಿಮಿ ತಬೂಕು,ಹಸನ್ ಹಾಜಿ ಕುಪ್ಪೆಪದವು,ಜಮಾಲುದ್ದೀನ್, ಮಂಜನಾಡಿ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ , ಇಕ್ಬಾಲ್ ಬಾಳಿಲ, ಇಬ್ರಾಹಿಂ ಹಾಜಿ, ಶಂಶೂಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬ ಕಿನ್ಯ ಇದರ ಕೋಶಾಧಿಕಾರಿ ಅಬೂಸಾಲಿ ಹಾಜಿ ಕಿನ್ಯ, ಕಾರ್ಯದರ್ಶಿ ಸಿರಾಜ್ ಕಿನ್ಯ ,ದಾರು ಸಲಾಂ ಶರೀಯತ್ ಕಾಲೇಜಿನ ಮುಅಲ್ಲಿಂ ಫಾರೂಕ್ ದಾರಿಮಿ , ಇಮ್ರಾನ್ ಅಝ್ ಅರಿ ಉಪಸ್ಥಿತರಿದ್ದರು







