ಮಂಗಳನಗರ: ಮುನಾಜಾತ್ ದುಆ ಮಜ್ಲಿಸ್

ಮಂಗಳೂರು : ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಮ್ ಅಕಾಡಮಿಯ ವಾರ್ಷಿಕ ಸಮ್ಮೇಳನವು ಮಂಗಳನಗರ ಮಸ್ಜಿದುನ್ನೂರ್ ವಠಾರದಲ್ಲಿ ಮುನಾಜಾತ್ ದುಆ ಮಜ್ಲಿಸ್‌ನೊಂದಿಗೆ ರವಿವಾರ ನಡೆಯಿತು.
ಮಸ್ಜಿದುನ್ನೂರ್ ಉಪಾಧ್ಯಕ್ಷ ಇಸ್ಮಾಯಿಲ್ ಧ್ವಜಾರೋಹನಗೈದರು. ಖಬರ್ ಝಿಯಾರತ್ ಬಳಿಕ ಸಮಸ್ತದ ಅಗಲಿದ ಉಲಮಾಗಳ ಮತ್ತು ಊರ ಹಿರಿಯರ ಅನುಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುದರ್ರಿಸ್ ಹನೀಫ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಖತೀಬ್ ಆಸಿಫ್ ಅಝ್ಹರಿ ಮುಖ್ಯಭಾಷಣಗೈದರು.
ಮಜ್ಲಿಸುನ್ನೂರು ಮಜ್ಲಿಸ್ ಶೈಖುನಾ ಮಾಹಿನ್ ಉಸ್ತಾದ್ ದುಆದೊಂದಿಗೆ ಆರಂಭಗೊಂಡು ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ನೇತೃತ್ವದಲ್ಲಿ ನಡೆಯಿತು. ಎಸ್‌ಬಿ ಮುಹಮ್ಮದ್ ದಾರಿಮಿಯ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಮಜ್ಲಿಸ್ ನಡೆಯಿತು.
ಮಗ್ರಿಬ್ ಬಳಿಕ ಸಮಾರೋಪ ಸಮ್ಮೇಳನವು ಮೌಲಾನಾ ಅಬ್ದುಲ್ ಅಝೀಝ್ ದಾರಿವಿಯ ಅಧ್ಯಕ್ಷತೆಯಲ್ಲಿ ಜರಗಿತು. ಎಸ್‌ಬಿ ಮುಹಮ್ಮದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು. ಕಿ. ಖಾದರ್ ಭಾಗವಹಿಸಿದ್ದರು. ವಾಗ್ಮಿ ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಮುಖ್ಯ ಭಾಷಣ ಮಾಡಿದರು.
ಮೂಸ ದಾರಿಮಿ, ಮಜೀದ್ ದಾರಿಮಿ ಕಿನ್ಯ, ತಬೂಕ್ ಅಬ್ದುರ‌್ರಹ್ಮಾನ್ ದಾರಿಮಿ, ಕೆಆರ್ ಹುಸೈನ್ ದಾರಿಮಿ ಮಾತನಾಡಿದರು. ಸಯ್ಯಿದ್ ಅಮೀರ್ ತಂಳ್, ಸಯ್ಯಿದ್ ಬಾತಿಶ್ ತಂಳ್, ಅಬೂಬಕರ್ ದಾರಿಮಿ, ಅಬ್ದುರ‌್ರಹ್ಮಾನ್ ಫೈಝಿ, ಎನ್‌ಎ ಖಾದರ್, ಎಂಎಚ್ ಬಾವುಚ್ಚ, ಜಮಾಲುದ್ದೀನ್, ಬಶೀರ್ ಮಂಗಳನಗರ, ಅಶ್ರಫ್ ಮರಾಠಿಮೂಲೆ, ಅಶ್ರಫ್ ಎನ್‌ಎ ಶೇಕ್ ಸಿದ್ದೀಕ್, ಎಎಚ್ ತುಂಬೆ, ಮುಹಮ್ಮದ್ ಚೊಕ್ಕಬೆಟ್ಟು, ಯೂಸುಫ್ ಹಾಜಿ ಹೈವೆ, ಇಬ್ರಾಹಿಂ ಎಸ್‌ಕೆ, ಬಶೀರ್ ಚೊಕ್ಕಬೆಟ್ಟು, ಹಸೀರ್ ಮಂಗಳನಗರ, ಇಸ್ಮಾಯಿಲ್ ಸಾಹಿಬ್, ಅಬ್ದುಲ್ ರಹೀಂ. ಸಿ.ಎಚ್.ಮುಹಮ್ಮದ್, ಎ.ಎ. ಅಬ್ಬಾಸ್, ಇಬ್ರಾಹಿಂ ಕೊಣಾಜೆ, ಬಾವುಚ್ಚ ನೆಕ್ಕರೆ, ವಿನ್ಸೆಂಟ್ ವೇಗಸ್, ಇಸಾಕ್ ಹಾಜಿ ನಾಟೆಕಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಕಾರ್ಯಕ್ರಮ ನಿರೂಪಿಸಿದರು.