ಬೂಕರ್ ಪ್ರಶಸ್ತಿಯ ದೀರ್ಘ ಪಟ್ಟಿಗೆ ತಮಿಳು ಲೇಖಕ ಪೆರುಮಾಳ್ ಮುರುಗನ್

ಹೊಸದಿಲ್ಲಿ, ಮಾ. 14: 2023ರ ಇಂಟರ್ನ್ಯಾಶನಲ್ ಬೂಕರ್ ಪ್ರಶಸ್ತಿಗೆ ತಮಿಳು ಲೇಖಕ ಪೆರುಮಾಳ್ ಮುರುಗನ್ ನಾಮನಿರ್ದೇಶನಗೊಂಡಿದ್ದಾರೆ. ಪ್ರಶಸ್ತಿ ಸ್ಪರ್ಧಿಗಳ ದೀರ್ಘ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ ಎಂದು ಬುಕರ್ ಪ್ರೈಝ್ ಫೌಂಡೇಶನ್ ಮಂಗಳವಾರ ಘೋಷಿಸಿದೆ.
ಅವರ 2016ರ ಪುಸ್ತಕ ‘ಪಯರ್’ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪುಸ್ತಕವನ್ನು ಅನಿರುದ್ಧನ್ ವಾಸುದೇವನ್ ತಮಿಳಿನಿಂದ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಓಡಿ ಹೋಗಿ ಮದುವೆಯಾಗುವ ಅಂತರ್ಜಾತಿ ದಂಪತಿಯು ಎದುರಿಸುವ ಭಯಾನಕ ಘಟನಾವಳಿಗಳ ಕತೆಯನ್ನು ಪುಸ್ತಕ ಹೇಳುತ್ತದೆ.
56 ವರ್ಷದ ಪೆರುಮಾಳ್ ಮುರುಗನ್ 13 ಪುಸ್ತಕಗಳ ಬುಕರ್ ದೀರ್ಘ ಪಟ್ಟಿಗೆ ಸೇರ್ಪಡೆಗೊಂಡಿರುವ ಮೊದಲ ತಮಿಳು ಲೇಖಕ ಆಗಿದ್ದಾರೆ.
Next Story





