ಮಾ.15 ರಿಂದ ಮೂಳೂರು ಮರ್ಕಝ್ ನಲ್ಲಿ ಬೆಳ್ಳಿಹಬ್ಬದ ಸಮಾಪನ, ಶಹದಾ; ಕಾನ್ಫರೆನ್ಸ್

ಉಡುಪಿ ; ದಕ್ಷಿಣ ಕರ್ನಾಟಕ ಸುನ್ನಿ ಸೆಂಟರಿನ ಅಧೀನ ಸಂಸ್ಥೆಯಾದ ಮೂಳೂರಿನ ಮರ್ಕಝ್ ತ ಅಲೀಮಿಲ್ ಇಹ್ಸಾನಿನಲ್ಲಿ ನವೀಕೃತ ಮಸೀದಿಯ ಉದ್ಘಾಟನೆ ಹಾಗೂ ಸಂಸ್ಥೆಯ ಬೆಳ್ಳಿ ಹಬ್ಬದ ಸಮಾರೋಪ ಪ್ರಯುಕ್ತ ಮಾರ್ಚ್ 15 ರಿಂದ 17ರ ವರೆಗೆ ಮೂರು ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.
ಮಾರ್ಚ್ 15 ರಂದು ಬೆಳಿಗ್ಗೆ 10 ಗಂಟೆಗೆ ಸುಲೈಮಾನ್ ಸಅದಿ ಅಲ್ ಅಫ್ಳ್‍ಲಿ ವಾಳಾಡ್ ರವರಿಂದ ರಂಝಾನ್ ಸಿದ್ಧತೆಗಳು ಎಂಬ ವಿಷಯದಲ್ಲಿ ಮತ್ತು ಮಧ್ಯಾಹ್ನ 2 ಗಂಟೆಯಿಂದ ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಯೋಲಯವರಿಂದ ಮಖ್‍ಬರಗಳ ಅಚಾರ ಮತ್ತು ಅನಾಚಾರಗಳ ಎಂಬ ವಿಷಯದ ಕುರಿತು ತರಗತಿಗಳು ನಡೆಯಲಿದೆ. ಮಗ್ರಿಬ್ ನಮಾಝ್ ನಂತರ ಕುಂಬೋಳ್ ಅಸ್ಸಯ್ಯಿದ್ ಜಅಫರ್ ಸ್ವಾದಿಕ್ ತಂಙಳ್‍ರವರ ನೇತೃತ್ವದಲ್ಲಿ ವಾರ್ಷಿಕ ಜಲಾಲಿಯಾದ ಮಜ್ಲಿಸ್ ನಡೆಯಲಿದೆ.
ಮಾರ್ಚ್ 16 ರಂದು ದಅವಾ ವಿಭಾಗದಲ್ಲಿ ದಾರ್ಮಿಕ ಪದವಿ ಹಾಗೂ ಲೌಕಿಕದಲ್ಲಿ ಎಂ ಕಾಂ ಪದವಿ ಪೂರ್ತಿಗೊಳಿಸಿದ 11 ವಿದ್ಯಾರ್ಥಿಗಳು ಕಾಲಿಕ ವಿಷಯಗಳಲ್ಲಿ 11 ಪ್ರಬಂಧ ಮಂಡನೆ ಮಾಡಲಿದ್ದಾರೆ. ರಾತ್ರಿ ಶಾದುಲಿ ರಾತೀಬ್ ನಡೆಯಲಿದೆ.
ಮಾರ್ಚ್ 17ರಂದು ಬೆಳಿಗ್ಗೆ 9 ಗಂಟೆಗೆ ಪ್ರವಾಸಿ ಸಂಗಮ, ಹಳೆ ವಿದ್ಯಾರ್ಥಿ ಮೀಟ್ ಹಾಗೂ ಪೇರೆನ್ಸ್ ಸಂಗಮ ನಡೆಯಲಿದ್ದು ಮಧ್ಯಾಹ್ನ ನವೀಕೃತ ಗೊಂಡ ಸಂಸ್ಥೆ ಮಸೀದಿಯನ್ನು ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಳ್ ರವರು ಜುಮಾ ನಮಾಜಿನ ಮುಖಾಂತರ ಉದ್ಘಾಟಿಸಲಿದ್ದಾರೆ. ತಂಙಳ್‍ರವರ ಅಧ್ಯಕ್ಷತೆಯಲ್ಲಿ ಶಹಾದಾ: ಕಾನ್ಫರೆನ್ಸ್, ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮಗಳ ಸಮಾಪನ ಸಮಾರಂಭ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು ಉಡುಪಿ ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ ರಹಿಮಾನ್ ಮದನಿ ಉದ್ಘಾಟಿಸಲಿದ್ದಾರೆ.
ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರಾಸ್ಥಾವಿಕ ಬಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಸಾದಾತುಗಳು ಉಲಮಾಗಳು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಜನರಲ್ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.