ಮತ್ತೆ 10 ಸಾವಿರ ಉದ್ಯೋಗಿಗಳ ವಜಾ: ಮೆಟಾ ಘೋಷಣೆ
ನ್ಯೂಯಾರ್ಕ್, ಮಾ.14: ಎರಡನೇ ಹಂತದ ಉದ್ಯೋಗ ಕಡಿತದಲ್ಲಿ ಮತ್ತೆ 10,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ವೇದಿಕೆ ಮಂಗಳವಾರ ಘೋಷಿಸಿದೆ.
ಆದಾಯದಲ್ಲಿ ಇಳಿಕೆಯಾದ್ದರಿಂದ ಈ ಕ್ರಮ ಅನಿವಾರ್ಯ ಎಂದು ಆಡಳಿತವರ್ಗ ಹೇಳಿದೆ. ಈ ಹೇಳಿಕೆ ಹೊರಬಿದ್ದೊಡನೆ ಮೆಟಾದ ಶೇರುಗಳ ಮೌಲ್ಯದಲ್ಲಿ 6%ದಷ್ಟು ಏರಿಕೆ ದಾಖಲಾಗಿದೆ. ಕಳೆದ ನವೆಂಬರ್‌ನಲ್ಲಿ 11,000 ಉದ್ಯೋಗಿಗಳನ್ನು ಸಂಸ್ಥೆ ವಜಾಗೊಳಿಸಿತ್ತು.
Next Story