ಮಂಗಳೂರು -ವಿಜಯಪುರ ವಿಶೇಷ ರೈಲು ಸೇವೆಗಳ ತಾತ್ಕಾಲಿಕ ರದ್ದತಿ ಇಲ್ಲ

ಮಂಗಳೂರು, ಮಾ.15: ನೈಋತ್ಯ ರೈಲ್ವೆಯಲ್ಲಿ ದೇವರಗುಡ್ಡ ಮತ್ತು ಹಾವೇರಿ ರೈಲು ನಿಲ್ದಾಣಗಳ (ಹುಬ್ಬಳ್ಳಿ - ಚಿಕ್ಕಜಾಜೂರು ಡಬ್ಲಿಂಗ್ ಯೋಜನೆ) ದ್ವಿಗುಣಗೊಳಿಸುವ ಪೂರ್ವ-ನಾನ್ ಇಂಟರ್‌ಲಾಕಿಂಗ್ ಮತ್ತು ಇಂಟರ್‌ಲಾಕಿಂಗ್ ರಹಿತ ಕಾಮಗಾರಿಯನ್ನು ಮುಂದೂಡಿದ ಕಾರಣ ಮಂಗಳೂರು -ವಿಜಯಪುರ ರೈಲು ಸೇವೆಗಳ ರದ್ದತಿಯನ್ನು ಹಿಂಪಡೆಯಲಾಗಿದೆ ಎಂದು ದಕ್ಷಿಣ ವಲಯ ರೈಲ್ವೆಯ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
ಮಾರ್ಚ್ 17, 18 ಮತ್ತು 19 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಜಂಕ್ಷನ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ಪ್ರಯಾಣದ ಸೇವೆ ಮತ್ತು ಮಾರ್ಚ್ 18, 19 ಮತ್ತು 20 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ಪ್ರಯಾಣದ ಸೇವೆಯು ಸಾಮಾನ್ಯ ವೇಳಾಪಟ್ಟಿಯಂತೆ ಇರಲಿದೆ ಎಂದು ರೈಲ್ವೆ ಪ್ರಕಟನೆ ಸ್ಪಷ್ಟಪಡಿಸಿದೆ.
Next Story