ಕಲೆಯ ತುಡಿತವಿದ್ದರೆ ಮಾತ್ರ ಶ್ರೇಷ್ಠ ಕಲಾವಿದನಾಗಲು ಸಾಧ್ಯ: ಜೀವನ ರಾಂ

ಮಂಗಳೂರು: ಕಲೆಯ ತುಡಿತವಿದ್ದಾಗ ಮಾತ್ರ ಶ್ರೇಷ್ಠ ಕಲಾವಿದನಾಗಲು ಸಾಧ್ಯ ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಜೀವನ ರಾಂ ಸುಳ್ಯ ಹೇಳಿದರು.
ಕಲಾಭಿ ಹಾಗೂ ಕಲಾಭಿ ಥಿಯೇಟರ್ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡ ‘ಎ ಪಪೆಟ್ ಜರ್ನಿ’ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾವಿದ್ದ ಜಾಗದಿಂದಲೇ ರಂಗಕಾಯಕವನ್ನು ಆರಂಭಿಸಬೇಕು ಎಂಬುದು ನಿನಾಸಂ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಆಶಯವಾಗಿತ್ತು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಆರೋಗ್ಯಕರ ಸಮಾಜ ನಿರ್ಮಾಣದ ಕನಸು ಹೊತ್ತ ‘ಕಲಾಭಿ’ಯ ಪ್ರಾಮಾಣಿಕ ಪ್ರಯತ್ನವು ಶ್ಲಾಘನೀಯ ಎಂದರು.
ಶಾಸಕ ಭರತ್ ಶೆಟ್ಟಿ ಮಾತನಾಡಿದರು. ಕಲಾಭಿ ಅಧ್ಯಕ್ಷ ಸುರೇಶ್ ಬಿ. ಸ್ವಾಗತಿಸಿದರು. ಉದ್ಯಮಿ ಜಗದೀಶ್ ಶೆಟ್ಟಿ, ಕಲಾಪೋಷಕ ಉಮೇಶ್, ಕಲಾಭಿ ಉಪಾಧ್ಯಕ್ಷ ಸುಮನ್ ಕದ್ರಿ, ಪಪೆಟ್ ಕಾರ್ಯಾಗಾರದ ನಿರ್ದೇಶಕ ಶ್ರವಣ್ ಹೆಗ್ಗೋಡು, ಕಳರಿಪಯಟ್ ಪಟು ಗಣೇಶ್ ಕೆ.ವಿ., ಕಾರ್ಯದರ್ಶಿ ಉಜ್ವಲ್ ಯು.ವಿ. ಪಾಲ್ಗೊಂಡಿದ್ದ್ದರು.
*ಕಳರಿಪಯಟ್ ಮೂಲ ಪಟ್ಟುಗಳ ಕಾರ್ಯಾಗಾರಕ್ಕೆ ಈ ಸಂದರ್ಭ ಚಾಲನೆ ನೀಡಲಾಯಿತು. ಕಾರ್ಯಾಗಾರವು ಮಾ.೨೯ರಂದು ಸಮಾರೋಪಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.