ಉಡುಪಿ ಜಿಲ್ಲೆಯಲ್ಲಿ ಮಾ.17ರಿಂದ ‘ಕರಾವಳಿ ಪ್ರಜಾಧ್ವನಿ ಯಾತ್ರೆ’

ಉಡುಪಿ, ಮಾ.15: ಭ್ರಷ್ಟ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಪ್ರಜಾಧ್ವನಿ ಯಾತ್ರೆ’ ಮಾ.17 ಮತ್ತು 18ರಂದು ಉಡುಪಿ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ತಿಳಿಸಿದ್ದಾರೆ.
ಯಾತ್ರೆಯು ಮಾ.17ರ ಶುಕ್ರವಾರದಂದು ಕಾರ್ಕಳ ಬ್ಲಾಕ್‌ನಲ್ಲಿ ಸಂಚರಿಸಲಿದೆ. ಬೆಳಗ್ಗೆ 10:30ಕ್ಕೆ ಬೆಳ್ಮಣ್‌ನ ಶ್ರೀಕೃಷ್ಣ ಸಭಾಗ್ರಹ, 11:30ಕ್ಕೆ ಬಜಗೋಳಿಯ ಚಿರಾಗ್ ಸಭಾಭವನ, ಅಪರಾಹ್ನ 3:00ಕ್ಕೆ ಕಾರ್ಕಳ ಬಂಡಿಮಠದ ಬಸ್‌ನಿಲ್ದಾಣದ ಬಳಿ ಹಾಗೂ ಸಂಜೆ 5:00ಕ್ಕೆ ಹೆಬ್ರಿ ಬಸ್ ನಿಲ್ದಾಣದ ಬಳಿ.
ಮಾ.18ರ ಶನಿವಾರ ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್‌ಗಳಲ್ಲಿ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮಗಳಿವೆ. ಬೆಳಗ್ಗೆ 10:30ಕ್ಕೆ ಬ್ರಹ್ಮಾವರ ಬ್ಲಾಕ್‌ನ ಪೇತ್ರಿ ಜಂಕ್ಷನ್‌ನಲ್ಲಿ, ಅಪರಾಹ್ನ 3:00ಕ್ಕೆ ಪರ್ಕಳದ ಮಾರ್ಕೆಟ್ ಬಳಿ ಹಾಗೂ ಸಂಜೆ 5:00ಕ್ಕೆ ಸಂತೆಕಟ್ಟೆ ಮೀನು ಮಾರ್ಕೆಟ್ ಜಂಕ್ಷನ್‌ನಲ್ಲಿ.
ಸಮವೇಶಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.







