ರಾಜ್ಯಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಗೆದ್ದ ಉಡುಪಿಯ ವಿಬಿಸಿಎಲ್ ತಂಡ

ಉಡುಪಿ, ಮಾ.15: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ 10ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ತಂಡ ಗೆದ್ದುಕೊಂಡಿದೆ.
ಕಾಲೇಜಿನ ವಿದ್ಯಾರ್ಥಿಗಳಾದ ಉದಯ್ ಪ್ರಸಾದ್ ಎನ್.ಜೆ, ನಯನ ಸಿ ಹಾಗೂ ಐಶ್ವರ್ಯ ಎನ್.ಪಿ ಅವರನ್ನು ಒಳಗೊಂಡ ತಂಡ ಸ್ಪರ್ಧೆಯನ್ನು ಗೆದ್ದುಕೊಂಡಿದೆ. ವಿಜೇತ ತಂಡದ ಕಾಲೇಜಿನ ಕಾನೂನು ವಿಭಾಗದ ಮುಖ್ಯಸ್ಥೆ ಸುರೇಖ ಕೆ. ಅವರ ನೇತೃತ್ವದಲ್ಲಿ ಭಾಗವಹಿಸಿತ್ತು.
Next Story