ಕಲ್ಯಾಣಪುರ ಮಿಲಾಗ್ರಿಸ್‌ಗೆ ನ್ಯಾಕ್‌ನಿಂದ ‘ಬಿ++’ ಮಾನ್ಯತೆ

ಕಲ್ಯಾಣಪುರ : ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿಗೆ ನೇಶನಲ್ ಅಕ್ರಿಡೀಷನ್ ಆ್ಯಂಡ್ ಅಸ್ಸೆಸ್‌ಮೆಂಟ್ ಕೌಂನ್ಸಿಲ್ (ನ್ಯಾಕ್)ನಿಂದ ‘ಬಿ++’ ಗ್ರೇಡ್ ಮಾನ್ಯತೆ ಸಿಕ್ಕಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ನ್ಯಾಕ್ ತಂಡ ಕಳೆದ ವಾರ ಕಾಲೇಜಿಗೆ ಭೇಟಿ ನೀಡಿ ನಾಲ್ಕನೇ ಹಂತದ ಮಾನ್ಯತಾ ಪ್ರಕ್ರಿಯೆ ನಡೆಸಿತು ಎಂದು ಪ್ರಕಟಣೆ ತಿಳಿಸಿದೆ.
ಹೊಸದಿಲ್ಲಿಯ ಇಂದಿರಾಗಾಂಧಿ ನೇಶನಲ್ ಓಪನ್ ವಿವಿಯ ಪ್ರೊ ವೈಸ್ ಚಾನ್ಸಲರ್ ಡಾ.ಸುಮಿತ್ರಾ ಕುಕ್ರಿಟಿ ನೇತೃತ್ವದ ನ್ಯಾಕ್ ಮಾನ್ಯತಾ ತಂಡದಲ್ಲಿ ಹರ್ಯಾಣ ಕುರುಕ್ಷೇತ್ರ ವಿವಿಯ ಪ್ರಾಧ್ಯಾಪಕ ಡಾ.ಹವಾ ಸಿಂಗ್ ಹಾಗೂ ಗೋವಾದ ಸರಕಾರಿ ಆರ್ಟ್ಸ್, ಕಾಮರ್ಸ್ ಆ್ಯಂಡ್ ಸಾಯನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೋಯ್‌ದೀಪ್ ಭಟ್ಟಾಚಾರ್ಜಿ ಅವರು ಸದಸ್ಯರಾಗಿದ್ದರು.
Next Story