ಮಂಗಳೂರು: ಮಟ್ಕಾ ಜುಗಾರಿ ಆಟವಾಡುತ್ತಿದ್ದ ಮೂವರ ಸೆರೆ

ಮಂಗಳೂರು, ಮಾ.15: ನಗರದ ಜ್ಯೋತಿ ಜಂಕ್ಷನ್ ಬಳಿಯ ಸ್ಮಾರ್ಟ್ ಟವರ್‌ನ ನೆಲಮಹಡಿಯಲ್ಲಿ ಮಟ್ಕಾ ಜುಗಾರಿ ದಂಧೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೋಟೆಕಾರ್ ಗ್ರಾಮದ ಬಾಯಾರ್‌ತೋಟದ ಪ್ರವೀಣ್ (33), ಕುಡುಪುವಿನ ಮನೋಜ್ ಜಾರ್ಜ್ ನೊರೊನ್ಹಾ (44), ಗೋರಿಗುಡ್ಡದ ರಾಕೇಶ್ (47) ಬಂಧಿತ ಆರೋಪಿಗಳು.
ಇವರಿಂದ 3 ಸಾವಿರ ರೂ. ನಗದು, 2 ಮೊಬೈಲ್, 2 ಕಂಪ್ಯೂಟರ್ ಹಾಗೂ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 75 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
Next Story