5,000 ರೈತರಿಂದ ಮುಂಬೈಗೆ ಪ್ರತಿಭಟನಾ ಮೆರವಣಿಗೆ

ಮುಂಬೈ, ಮಾ. 15: ಅರಣ್ಯ ಭೂಮಿಯಲ್ಲಿ ಹಕ್ಕು ನೀಡಬೇಕು ಮತ್ತು ರೈತರನ್ನು ಬಾಧಿಸುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ 5,000ಕ್ಕೂ ಅಧಿಕ ರೈತರು ಮುಂಬೈ ನಗರದತ್ತ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ್ದಾರೆ. ಸೋಮವಾರ ಆರಂಭವಾಗಿರುವ ಮೆರವಣಿಗೆಯು ಶುಕ್ರವಾರ ರಾತ್ರಿ ಮುಂಬೈ ತಲುಪಲಿದೆ.
ಐದು ವರ್ಷಗಳ ಹಿಂದೆಯೂ ರೈತರು ಮುಂಬೈಗೆ ಮೆರವಣಿಗೆಯಲ್ಲಿ ಹೋಗಿದ್ದರು. ಆಗ ಸರಕಾರವು, ರೈತರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂಬ ಭರವಸೆಯನ್ನು ನೀಡಿತ್ತು. ಆದರೆ, ಈವರೆಗೆ ರೈತರ ಕೆಲವೇ ಬೇಡಿಕೆಗಳು ಈಡೇರಿವೆ.
ಹಾಲಿ ಮೆರವಣಿಗೆಯು ಅಖಿಲ ಭಾರತ ಕಿಸಾನ್ ಸಭಾದ ನೇತೃತ್ವದಲ್ಲಿ ನಾಶಿಕ್‍ನಿಂದ ಆರಂಭಗೊಂಡಿದೆ. ಅಹ್ಮದ್‍ನಗರ, ಧುಲೆ ಮತ್ತು ಪಾಲ್ಘಾರ್‍ಗಳ ರೈತರು ಮೆರವಣಿಗೆಯನ್ನು ಸೇರಿಕೊಂಡಿದ್ದಾರೆ.
ರೈತರ ಕೆಲವು ಬೇಡಿಕೆಗಳನ್ನು 2018ರಲ್ಲಿ ಈಡೇರಿಸಲಾಗಿದೆ, ಆದರೆ ತುಂಬಾ ಬೇಡಿಕೆಗಳು ಇನ್ನು ಈಡೇರಿಲ್ಲ ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅಜಿತ್ ನವಾಲೆ ಹೇಳಿದ್ದಾರೆ.
Next Story





