33 ಕೊಲೆ ಪ್ರಕರಣ ಆರೋಪಿಗೆ 1,310 ವರ್ಷ ಜೈಲುಶಿಕ್ಷೆ

ಸ್ಯಾನ್‍ಸಲ್ವದೋರ್, ಮಾ.15: 33 ಕೊಲೆ, 9 ಕೊಲೆ ಸಂಚು ಹಾಗೂ ಇತರ 7 ಅಪಾಯಕಾರಿ ಕ್ರಿಮಿನಲ್ ಕೃತ್ಯ ಎಸಗಿದ ಅಪರಾಧಕ್ಕಾಗಿ ಕುಖ್ಯಾತ ಗ್ಯಾಂಗ್‍ಸ್ಟರ್ ವಿಲ್ಮರ್ ಸೆಗೋವಿಯಾಗೆ ಎಲ್‍ಸಾಲ್ವದೋರ್‍ನ ನ್ಯಾಯಾಲಯ 1,310 ಜೈಲುಶಿಕ್ಷೆ ವಿಧಿಸಿದೆ.
ಎಲ್‍ಸಲ್ವದೋರ್‍ನಲ್ಲಿ ಘೋರ ಅಪರಾಧ ಕೃತ್ಯಗಳಿಂದಾಗಿ ಕುಖ್ಯಾತವಾಗಿರುವ ಮರಾ ಸಲ್ವಟ್ರುಚ ಗ್ಯಾಂಗ್‍ನ ಶಲ್ಟನ್ ಘಟಕದ ಸದಸ್ಯನಾಗಿರುವ ವಿಲ್ಮರ್ ದೀರ್ಘಾವಧಿಯಿಂದ ಪಾತಕಕೃತ್ಯ ನಡೆಸಿ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ. ಮತ್ತೊಬ್ಬ ಕ್ರಿಮಿನಲ್ ಮಿಗುವೆಲ್ ಆ್ಯಂಗೆಲ್ ಪೋರ್ಟಿಲೊಗೆ 22 ಕೊಲೆ ಪ್ರಕರಣ, ಹಾಗೂ ಹಲವಾರು ಕೊಲೆಯತ್ನ, ದಾಳಿ, ಅಪಹರಣ, ಲೂಟಿ ಮತ್ತು ಸುಲಿಗೆ ಕೃತ್ಯಗಳಿಗಾಗಿ 945 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ದೇಶದಲ್ಲಿ ಅಪರಾಧ ಕೃತ್ಯ ನಡೆಸುತ್ತಿರುವ ಕುಖ್ಯಾತ ಗ್ಯಾಂಗ್‍ಗಳ ವಿರುದ್ಧ ಅಲ್ಲಿನ ಸರಕಾರ ಕೈಗೊಂಡಿರುವ ಕಠಿಣ ಕ್ರಮಗಳಿಂದಾಗಿ ಹಲವು ಕ್ರಿಮಿನಲ್‍ಗಳು ಜೈಲುಪಾಲಾಗಿದ್ದಾರೆ.
Next Story