ಹೊಸಬೆಟ್ಟು ಜಟ್ಟಿ ನಿರ್ಮಾಣಕ್ಕೆ ಸರ್ವೇ ನಡೆಸಲು ಬಂದಿದ್ದ ಎನ್‌ಎಂಪಿಎ ಅಧಿಕಾರಿಗಳಿಗೆ ಮುತ್ತಿಗೆ

ಸುರತ್ಕಲ್, ಮಾ. 15: ಇಲ್ಲಿನ ಹೊಸಬೆಟ್ಟು ಜಟ್ಟಿ ನಿರ್ಮಾಣಕ್ಕೆ ಸರ್ವೇ ನಡೆಸಲು ಬಂದಿದ್ದ ಎನ್‌ಎಂಪಿಎ ಅಧಿಕಾರಿಗಳನ್ನು ಹೊಸಬೆಟ್ಟು ಮೊಗವೀರ ಸಂಘದ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಹೊಸಬೆಟ್ಟು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಹಿಂದೆ ಕಳುಹಿಸಿದ ಘಟನೆ ಬುಧವಾರ ವರದಿಯಾಗಿದೆ.
ಈ ವೇಳೆ ಅಧಿಕಾರಿಗಳು ಮತ್ತು ಹೊಸಬೆಟ್ಟು ಮೊಗವೀರ ಸಂಘದ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸಮಜಾಯಿಷಿ ನೀಡಿದ ಅಧಿಕಾರಿ, " ನಾನು ಸರ್ವೇ ಮಾಡಲು ಬಂದಿದ್ದೇನೆ. ಅದಕ್ಕಾಗಿ ನನಗೆ ಮೇಲಾಧಿಕಾರಿಗಳಿಂದ ಒತ್ತಡಗಳಿವೆ. ಹಾಗಾಗಿ ಕಾಮಗಾರಿ ಆರಂಭಿಸುತ್ತಾರೋ ಬಿಡುತ್ತಾರೋ ಅದು ಮೇಲಾಧಿಕಾರಿಗಳಿಗೆ ಬಿಟ್ಟ ವಿಚಾರ. ನಾನು ಸರ್ವೇ ಮಾಡಿ ವಿವರ ನೀಡಲು ಮೇಲಾಧಿಕಾರಿಗಳು ತಿಳಿಸಿದ್ದಾರೆ. ಸರ್ವೇ ನಡೆಸಲು ಅವಕಾಶ ನೀಡುವಂತೆ ವಿನಂತಿಸಿದರು.
ಈ ವೇಳೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮುಖಂಡರು, ಈ ಭಾಗದಲ್ಲಿ ಜಟ್ಟಿ ನಿರ್ಮಾಣಕ್ಕೆ ಸಂಬಂಧಿಸಿ ಅದನ್ನು ವಿರೋಧಿಸಿ ಪ್ರತಿಭಟನೆಗಳನ್ನು ಮಾಡಿದ್ದೇವೆ. ಸ್ಥಳಿಯರಿಗೆ ಮಾಹಿತಿ ನೀಡದೆ ಎನ್‌ಎಂಪಿಎ ಅಧಿಕಾರಿಗಳು ಸಂಜೆಯ ವೇಳೆ ಯಾರಿಗೂ ತಿಳಿಸಿದೆ ಸರ್ವೇ ನಡೆಸಲು ಮುಂದಾಗಿರುವುದು ಅಕ್ಷ್ಯಮ್ಯ. ಸ್ಥಳೀಯ ರನ್ನು ಕತ್ತಲಿನಲ್ಲಿಟ್ಟು ಸರಕಾರ ಯಾವ ಅಭಿವೃದ್ಧಿ ಮಡಲು ಹೊರಟಿದೆ ಎಂದು ಅಧಿಕಾರಿಯನ್ನು ತರಾಟೆಗೆಗೆ ತೆಗೆದು ಕೊಂಡರು.
ವಸತಿಗಳಿಲ್ಲದ ಮೂರು ಎಕರೆ ಸ್ಥಳ ಸದ್ಯ ಗುರುತಿಸಲಾಗಿರುಚವ ಸ್ಥಳದಿಂದ ಕೆಲವೇ ದೂರದಲ್ಲಿರುವಾಗ ಯಾಕೆ ಆ ಪ್ರದೇಶವನ್ನು ಬಿಟ್ಟು ಜನ ವಸತಿ ಇರುವ ಪ್ರದೇಶವನ್ನು ಸರಕಾರ ಆಯ್ದುಕೊಂಡಿದೆ. ಇದು ಸರಕಾರ ಅಭಿವೃದ್ಧಿ ಮಡುವ ವಿಧಾನವೇ ಎಂದು ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಆ ಬಳಿಕವೂ ಪಟ್ಟು ಬಿಡದ ಅಧಿಖಾರಿ ಗ್ರಾಮಸ್ಥರನ್ನು ಪರಿಪಿತಯಾಗಿ ವಿನಂತಿಸಿದರೂ ಒಪ್ಪದ ಮೊಗವೀರ ಮುಖಂಡರು, ನಾವು ಈಗಾಗಲೇ ಶಾಸಕ ಭರತ್ ಶೆಟ್ಟಿ ಅವರನ್ನು ಸಂಪರ್ಕಿಸಿದ್ದೇವೆ. ಅವದು ಜಿಲ್ಲಾಧಿಕಾರಿ ಯೊಂದಿಗೆ ಸಭೆ ನಡೆಸಿ ನಮ್ಮ ಅಹವಾಲುಗಳನ್ನು ಮಂಡಿಸಲು ಅವಕಾಶ ಕಲಿಪಿಸುವುದಾಗಿ ಮಾಹಿತಿ ನೀಡಿದ್ದಾರೆ. ಅದರಂತೆ ಶಾಸಕರ ಭರವಸೆಯಂತೆ ನಮ್ಮ ಮುಂದಿನ ನಿರ್ಧಾರವನ್ನು ಜಶಾಸಕರು ಮತ್ತು ಜಿಲ್ಲಾಧಿಕಾರಿಯ ಸಭೆಯಲ್ಲಿ ತಿಳಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬಳಿಕ ವೀಧಿ ಇಲ್ಲದೆ ಎನ್‌ಎಂಪಿಎ ಅಧಿಕಾರಿಗಳು ಸರ್ವೇ ನಡೆಸಲಾಗದೆ ಹಿಂದಿರುಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಗುರಿಕಾರರಾದ ಗಂಗಾಧರ ಅವರು, ಜಟ್ಟಿ ನಿರ್ಮಾಣದ ಸಂಬಂಧ ಈ ಹಿಂದೆ ಎನ್‌ಎಂಪಿಎ ಅವರು ಆಯೋಜಿಸಿದ್ದ ಸಭೆಗೆ ಹೊಸಬೆಟ್ಟು ಗ್ರಾಮದ 40 ಮಂದಿ ಹಾಜರಾಗಿದ್ದೆವು. ಸಭೆಯಲ್ಲಿ ಎನ್‌ಎಂಪಿಎ ಅಧಿಕಾರಿಗಳ ಜೊತೆಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಆಗಲೇ ನಮ್ಮ ಬೇಡಿಕೆಗಳು ಮತ್ತು ಮಾಹಿತಿಯನ್ನು ಕೇಳಿದ್ದೆವು. ಆಗ ಅವರಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಹಾಗಾಗಿ ಕಂದಾಯ ಇಲಾಖೆಯ ಮತ್ತು ಜಿಲ್ಲಾಧಿಕಾರಿಯವರ ಜೊತೆ ಸಭೆ ನಡೆಸಿ ಜಿಲ್ಲಾಧಿಕಾರಿಗಳು ತ್ರಿಪಕ್ಷೀಯವಾಗಿ ಬರವಣಿಗೆಯ ಮೂಲಕ ಭರವಸೆ ನೀಡಲಿ ಎಂದು ಆಗ್ರಹಿಸಿದ್ದೆವು. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಅಧಿಕಾರಿಗಳು ಮಾ.10ಕ್ಕೆ ಸಭೆಯನ್ನೂ ಆಯೋಜಿಸಿದ್ದರು. ಆದರೆ, ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿದೆ. ಈ ಮಧ್ಯೆ ಸಂತ್ರಸ್ತರಾಗಿರುವ ನಮ್ಮನ್ನು ಹೊರಗಿಟ್ಟು ಉಳಿದ ನಾಲ್ಕು ಗ್ರಾಮದ ವರನ್ನು ಸೇರಿಸಿಕೊಂಡು ಎಂಎಂಪಿಎ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸದ್ಯ ಶಾಸಕರು ಮೂರ ದಿನಗಳ ಕಾಲ ಸರ್ವೇ ಮಾಡುವುದಿಲ್ಲ. ಜಿಲ್ಲಾಧಿಕಾಯವರೊಂದಿಗೆ ಸಭೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಹೇಳಿದ್ದಾರೆ. ಅದರಂತೆ ಅವರ ಭರವಸೆಯ ಮೇರೆಗೆ ಕಾಯಲಾಗುವುದು. ಆಬಳಿಕ ನಮ್ಮ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಗಂಗಾಧರ ಗುರುಕಾರ ಹೊಸಬೆಟ್ಟು, ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷ ಶಂಕರ್ ವಿ. ಸಾಲ್ಯಾನ್, ಉಪಾಧ್ಯಕ್ಷರಾದ ಚಂದ್ರಹಾಸ ಸುವರ್ಣ, ಪುಂಡಲೀಕ ಹೊಸಬೆಟ್ಟು, ಶರತ್ ಜಿ. ಕರ್ಕೇರ, ರವಿ ಎನ್. ಶ್ರೀಯಾನ್, ತುಷಾರ್ ಸಾಲ್ಯಾನ್, ದಿನೇಶ್ ಕಾಂಚನ್, ಪುರುಶೋತ್ತಮ ಕಾಂಚನ್, ಹೊಸಬೆಟ್ಟು ಮಹಿಳಾ ಸಮಾಜದ ಪದಾಧಿಕಾರಿಗಳು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
"ಅಧಿಕಾರಿಗಳು ಮಂಗಳವಾರ ಸಂಜೆ ಸರ್ವೇಗೆ ಬಂದಾಗ ಅವರರನ್ನು ತಡೆದು ತರಾಟೆಗೆ ತೆಗೆದು ಕೊಳ್ಳಲಾಗಿತ್ತು. ಆಗ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರ ಒತ್ತಡಕ್ಕೆ ಮಣಿದು ಸರ್ವೇ ನಡೆಸಲು ಬಂದಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಶಾಸಕರ ಜೊತೆ ವಿಚಾರಿಸಿದಾಗ ಅವರು ಅಧಿಕಾರಿಗಳಿಗೆ ಒತ್ತಡ ಹಾಕಿರುವ ಕುರಿತು ಯಾವುದೇ ಮಾತನಾಡಿಲ್ಲ".
- ಗಂಗಾಧರ ಗುರಿಕಾರ, ಹೊಸಬೆಟ್ಟು
ಅಧಿಕಾರಿಗಳಿಗೆ ಮಂಗಳೂರು ಉತ್ತರ ಕ್ಷೇತ್ರ ಶಾಸಕ ಭರತ್ ಶೆಟ್ಟಿಯವರು ಗ್ರಾಮಸ್ಥರ ವಿರೋಧದ ನಡುವೆಯೂ ಜಟ್ಟಿ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಎನ್‌ಎಂಪಿಎ ಅಧಿಕಾರಿಗಳ ಆರೋಪದ ಕುರಿತು ಶಾಸಕರ ಸ್ಪಷ್ಟನೆಗಾಗಿ ವಾರ್ತಾಭಾರತಿ ಶಾಸಕರನ್ನು ದೂರವಾಣಿಯ ಮೂಲಕ ಸಂಪರ್ಕಿಸಿತ್ತು. ಆದರೆ, ಆಸಕರು ಕರೆ ಸ್ವೀಕರಿಸಿಲ್ಲ.
ಹೊಸಬೆಟ್ಟು ಜಟ್ಟಿ ನಿರ್ಮಾಣದ ಹಿನ್ನೆಲೆಯಲ್ಲಿ ಎನ್‌ಎಂಪಿಎ ಅಧಿಕಾರಿಗಳು ಮಂಗಳವಾರ ಸಂಜೆ ಹೊಸಬೆಟ್ಟು ಜಟ್ಟಿ ನಿರ್ಮಾಣಕ್ಕೆ ಗುರುತಿಸಿದ್ದ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಮಾಹಿತಿ ಅರಿತು ಸ್ಥಳಕ್ಕೆ ತೆರಳಿದ್ದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವೇಲೆ ಅಧಿಕಾರಿಗಳು ಶಾಸಕ ಭರತ್ ಶೆಟ್ಟಿಯವರು ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿದು ಸರ್ವೇ ಕಾರ್ಯ ನಡೆಸಲು ಬಂದಿರುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ತಕ್ಷಣ ಗ್ರಾಮಸ್ಥರು ಶಾಸಕರನ್ನು ಸಂಪರ್ಕಿಸಲು ಯತ್ನಿಸಿದ್ದು ಅವರು ಸಿಕ್ಕಿರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ತಡರಾತ್ರಿಯ ವರೆಗೆ ಸಂಪರ್ಕಿಸಿದ ಬಳಿಕ ಶಾಸಕರು " "ಮೂರು ದಿನಗಳ ಕಾಲ ಸರ್ವೇಯನ್ನು ತಡೆಯಲಾಗುವುದು. ಆ ಸಮಯದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ತಿಳಿಸುವಂತೆ ಹೊಸಬೆಟ್ಟು ಮೊಗವೀರ ಸಂಘದ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ" ಎಂದು ಹೆಸರು ಹೊಸಬೆಟ್ಟು ಮೊಗವೀರ ಸಂಘದ ಪ್ರಮುಖರೇ ಮಾಹಿತಿ ನೀಡಿದ್ದಾರೆ.
ಕಳೆದ ಹಲವು ಸಮಯದಿಂದ ಇಲ್ಲಿ ಜಟ್ಟಿ ನಿರ್ಮಾಣಕ್ಕಾಗಿ ಸರಕಾರ ಮುಂದಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ, ಮಂಗಳೂರು ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲದೆ, ಸಂಸದ ನಳಿನ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಿದ್ದರು.