ಮಹಿಳೆಗೆ ಚೂರಿ ಇರಿತ: ಆರೋಪಿ ಬಂಧನ

ಬೆಂಗಳೂರು, ಮಾ.15: ವಿವಾಹಿತ ಮಹಿಳೆಗೆ ಚೂರಿ ಇರಿದ ಆರೋಪ ಸಂಬಂಧ ಓರ್ವನನ್ನು ಇಲ್ಲಿನ ಕೋಣನಗುಂಟೆ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಯಲಚೇನಹಳ್ಳಿಯ ರಾಜಣ್ಣ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ವಿವಾಹಿತಮಹಿಳೆ ಜೊತೆ 4 ವರ್ಷಗಳಿಂದ ಅನೈತಿಕ ಸಂಬಂಧವನ್ನು ಬೆಳೆಸಿಕೊಂಡಿದ್ದ. ಇತ್ತೀಚಿಗೆ ಅನೈತಿಕ ಸಂಬಂಧವನ್ನು ನಿಲ್ಲಿಸೋಣ ಎಂದು ಮಹಿಳೆ ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ನಿನ್ನೆ ರಾಜಣ್ಣ ಆಕೆಯನ್ನುನಡು ರಸ್ತೆಯಲ್ಲಿಯೇ ಚೂರಿಯಿಂದ ಚುಚ್ಚಿ ಕೊಲೆ ಮಾಡಲು ಯುತ್ನಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸದ್ಯ ಚಾಕುವಿನಿಂದ ಇರಿತಗೊಂಡು ಗಾಯಗೊಂಡ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
Next Story





