Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಮಲ್ನಾಡ್ ಗಲ್ಫ್ ಶಿಕ್ಷಣ ಮತ್ತು...

ಮಲ್ನಾಡ್ ಗಲ್ಫ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್, ಸೆಂಟ್ರಲ್ ಕಮಿಟಿ ಸೌದಿ ಅರೇಬಿಯಾ ವಾರ್ಷಿಕ ಮಹಾಸಭೆ

15 March 2023 11:42 PM IST
share
ಮಲ್ನಾಡ್ ಗಲ್ಫ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್, ಸೆಂಟ್ರಲ್ ಕಮಿಟಿ ಸೌದಿ ಅರೇಬಿಯಾ ವಾರ್ಷಿಕ ಮಹಾಸಭೆ

ದಮಾಮ್: ಪ್ರತಿಷ್ಠಿತ ಮಲ್ನಾಡ್ ಗಲ್ಫ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ (MGT), ಸೌದಿ ಅರೇಬಿಯಾದ ಸೆಂಟ್ರಲ್ ಕಮಿಟಿಯ ವಾರ್ಷಿಕ ಮಹಾಸಭೆಯು ದಮಾಮ್ ನ ವಯಂಡಮ್ ಹೋಟೆಲ್ ನಲ್ಲಿ ಇತ್ತೀಚೆಗೆ ನಡೆಯಿತು.

ಜಿದ್ದಾ, ರಿಯಾದ್, ಜುಬೈಲ್ ಹಾಗು ದಮಾಮ್- ಅಲ್ ಕೋಬಾರ್ ವಲಯಗಳ ಸುಮಾರು ನಲವತ್ತು ಸದಸ್ಯರುಗಳು ಹಾಜರಿದ್ದ ಸಭೆಯು ಅಶ್ರಫ್ JVC ಯವರ ಖಿರಾಅತ್ ನೊಂದಿಗೆ ಆರಂಭಗೊಂಡಿತು.

ಅಝ್ಗರ್ ತಳಗೂರು ಸ್ವಾಗತಿಸಿದರು. ಇರ್ಷಾದ್ ಚಕ್ಮಕ್ಕಿ ಅಜೆಂಡಾವನ್ನು ವಿವರಿಸಿ, ವಾರ್ಷಿಕ ವರದಿಯನ್ನು ವಾಚಿಸಿ, ಲೆಕ್ಕಪತ್ರದ ವಿವರವನ್ನು ಮಂಡಿಸಿದರು.

ಹಳೆಯ ಖಾತೆಗಳ ಸ್ಥಿತಿ, ರಮಝಾನ್ ಸಂಗ್ರಹ, ಆರೋಗ್ಯ (ಆದಾಯ ವ್ಯಯ), ವಲಯಗಳ ಲೆಕ್ಕಪತ್ರ, ಟ್ರಸ್ಟ್ ಬ್ಯಾಂಕ್ ಖಾತೆಗಳ ವಿವರಗಳು - ಇವೆಲ್ಲವನ್ನೂ‌ ಚರ್ಚಿಸಲಾಯಿತು. ಸದಸ್ಯರಿಗೆ ಬ್ಯಾಂಕ್ ಖಾತೆಯ ವಿವರವನ್ನು ನೋಡಲು ಟ್ರಸ್ಟ್ ಖಾತೆಗಳ ಆನ್‌ಲೈನ್ ಪುಟವನ್ನು ತೆರೆಯಲಾಗಿದೆ ಎಂದು ತಿಳಿಸಲಾಯಿತು.

ರಿಯಾದ್ ವಲಯದ ಅಧ್ಯಕ್ಷರಾದ ನಝೀರ್ ಜಯಪುರ ಮಾತನಾಡಿ, ಎಲ್ಲಾ ವಲಯಗಳು ರಮಝಾನ್ ಕಲೆಕ್ಷನ್‌ನೊಂದಿಗೆ ಘರ್ಷಣೆಯನ್ನು ತಪ್ಪಿಸಲು ರಚನಾತ್ಮಕ ಈವೆಂಟ್ ಸಮಯವನ್ನು ನಿರ್ಧರಿಸಲು ವಿನಂತಿಸಿದರು.

ಜುಬೈಲ್ ವಲಯದ ಅಧ್ಯಕ್ಷರಾದ ಅಬೂಬಕ್ಕರ್ ಹಂಡುಗೋಲಿ ಈ ಸಂದರ್ಭ ಮಾತನಾಡಿ ತಂಡದ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು.

ಜಿದ್ದಾ ವಲಯದ ಅಧ್ಯಕ್ಷ ಮುಸ್ತಾಕ್ ಗಬ್ಗಲ್ ಝೂಮ್ ಮೂಲಕ ಮಾತನಾಡಿ, ಅವಿರತ ಶ್ರಮ ಹಾಗು ಒಳ್ಳೆಯ ಕೆಲಸಕ್ಕಾಗಿ ಎಂಜಿಟಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಧನ ಸಂಗ್ರಹ ಹೆಚ್ಚಿಸಲು ಪ್ರತಿ ವಲಯದಿಂದ ವರ್ಷಕ್ಕೆ 2 ಕಾರ್ಯಕ್ರಮಗಳನ್ನು ನಡೆಸಲು ಸೂಚಿಸಿದರು.

ದಮಾಮ್ ಖೋಬಾರ್ ವಲಯದ ಅಧ್ಯಕ್ಷ ಬಶೀರ್ ಬಾಳುಪೇಟೆ ಈ ಸಂದರ್ಭ ಮಾತನಾಡಿ ಭವಿಷ್ಯದಲ್ಲಿ ಉತ್ತಮ ದಿನಗಳನ್ನು  ಮತ್ತು ಸವಾಲುಗಳನ್ನು ಎದುರಿಸಲು ಕರೆ ನೀಡಿದರು. ಅವರು ಕೇಂದ್ರ ಸಮಿತಿಯ ಖಜಾಂಚಿಯೂ ಆಗಿರುವುದರಿಂದ ಎಲ್ಲ ನಾಲ್ಕು ವಲಯಗಳ ಹಣಕಾಸುಗಳ ವಿವರವನ್ನೂ ಓದಿದರು.

ಕೇಂದ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಈ ಸಂದರ್ಭ ಮಾತನಾಡಿ, ತಮಗೆ ನೀಡಿದ ಅವಕಾಶಕ್ಕಾಗಿ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು. ಸಮಿತಿಯಲ್ಲಿನ ಕೆಲವು ಋಣಾತ್ಮಕ ಪರಿಣಾಮದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.

ಕೊನೆಯಲ್ಲಿ ಪ್ರಸ್ತುತ ಸಮಿತಿಯನ್ನು ಅಧ್ಯಕ್ಷ ಅಬ್ದುಲ್ ಸತ್ತಾರ್ ಜಯಪುರ ವಿಸರ್ಜನೆ ಮಾಡಿದರು.

ನೂತನ ಸಮಿತಿಯ ರಚನೆಯ ಜವಾಬ್ದಾರಿಯನ್ನು ಕೇಂದ್ರ ಸಮಿತಿಯು ಹಿರಿಯ ಸಲಹೆಗಾರರಾದ ಸಿರಾಜ್ ಚಕ್ಮಕ್ಕಿ ಮತ್ತು ಫಾರೂಕ್ ಅರಬ್ ಎನರ್ಜಿ ಅವರಿಗೆ ವಹಿಸಲಾಯಿತು.

ಕೆಳಗಿನ ಸಮಿತಿಯನ್ನು ಅಧಿಕೃತವಾಗಿ ಹಾಗು ಒಕ್ಕೊರಲಿನಿಂದ ಆಯ್ಕೆ ಮಾಡಲಾಯಿತು.

♦️ಅಧ್ಯಕ್ಷರು: ಅಬ್ದುಲ್ ಸತ್ತಾರ್ ಜಯಪುರ

♦️ಗೌರವಾಧ್ಯಕ್ಷರು: ಶರೀಫ್ ಕಳಸ

♦️ಉಪಾಧ್ಯಕ್ಷರುಗಳು: ಜಲಾಲ್ ಬೇಗ್, ಶಮೀಮ್ ಅಹ್ಮದ್ ಮೂಡಿಗೆರೆ, ಸಿದ್ದಿಕ್ ಕೊಡ್ಲಿಪೇಟೆ.

♦️ಪ್ರಧಾನ ಕಾರ್ಯದರ್ಶಿ: ಇರ್ಷಾದ್ ಅಬ್ದುಲ್ರಹ್ಮಾನ್ ಚಕ್ಮಕ್ಕಿ

♦️ಜಂಟಿ ಕಾರ್ಯದರ್ಶಿಗಳು: ಅಝ್ಗರ್ ತಳಗೂರು, ಸಮೀರ್ ಹಾಸನ ಮತ್ತು ಜೀಶಾನ್ ಜಿದ್ದಾ

♦️ಅಂತಾರಾಷ್ಟ್ರೀಯ ಸಂಯೋಜಕರು: ಇಕ್ಬಾಲ್ ಜಿದ್ದಾ ಮತ್ತು ಸಿರಾಜ್ ಚಕ್ಮಕ್ಕಿ

♦️ಹಿರಿಯ ಸಲಹೆಗಾರರು: ಫಾರೂಕ್ ಅರಬ್ ಎನರ್ಜಿ, ಸಿರಾಜ್ ಚಕ್ಮಕ್ಕಿ, ಅಫ್ಝಲ್ ಸಮದ್ ಮತ್ತು ಮುಸ್ತಾಕ್ ಜಿದ್ದಾ

♦️ಮಾಧ್ಯಮ ತಂಡ: ಇಬ್ರಾಹಿಂ ತೆಂಗಿನಮನೆ (ನಾಯಕ), ಹನೀಫ್ ಬಿಳಗುಳ, ಅಝ್ಗರ್ ಚಕ್ಮಕ್ಕಿ, ಸಿದ್ದಿಕ್ ಜಿದ್ದಾ

♦️ವೈದ್ಯಕೀಯ ತಂಡ: ಜುನೈದ್ ಇಸ್ಮಾಯಿಲ್ (ನಾಯಕ), ಮೊಹ್ಸಿನ್ (ಸದಸ್ಯರನ್ನು ಹೆಚ್ಚಿಸಬೇಕಾಗಿದೆ, ಇದನ್ನು ಮುಂದಿನ CC ಸಭೆಯಲ್ಲಿ ಚರ್ಚಿಸಲಾಗುವುದು)

♦️ಶಿಕ್ಷಣ ತಂಡ: ಮೊಹಮ್ಮದ್ ರಫಿ (ನಾಯಕ), ನಝೀರ್ ಜಯಪುರ, ಸಿದ್ದಿಕ್ ಬೇಲೂರು, ಸಿದ್ದಿಕ್ ಜಿದ್ದಾ ಮತ್ತು ಶಾಫಿ ಚಿಕ್ಕಮಗಳೂರು.

♦️ಪ್ರಕ್ರಿಯೆ ತಂಡ: ಸಿದ್ದಿಕ್ ಬೇಲೂರು (ನಾಯಕ), ಅಫ್ಝಲ್ ಸಮದ್ ಕೊಪ್ಪ, ಬಶೀರ್ ಬಾಳುಪೇಟೆ, ಇಕ್ಬಾಲ್ ಬಾಳೆಹೊನ್ನೂರು, ಅಬ್ದುಲ್ ಲತೀಫ್ ಜಯಪುರ.

CC ಸದಸ್ಯರಿಂದ, ಕೆಳಗಿನ ಪರಿಷ್ಕರಣೆ ಮಾಡಲಾಗಿದೆ:

♦️ರಿಯಾದ್ : ಗರಿಷ್ಠ ಸದಸ್ಯರ ಸಂಖ್ಯೆ 10ಕ್ಕೆ ಸೀಮಿತವಾಗಿರುವುದರಿಂದ ಇನಾಮ್‌ರವರನ್ನು  ಬಿಡುಗಡೆ ಮಾಡಲಾಯಿತು.

♦️ಜುಬೈಲ್: ಅಮೀರ್ ಸೊಹೈಲ್ ಮತ್ತು ಝೈದ್ ಸಮಿತಿಯಿಂದ ಕೈ ಬಿಡಲಾಯಿತು. ಸೇರ್ಪಡೆ: ಇಬ್ರಾಹಿಂ ಮತ್ತು ಅಸ್ಲಾಂ

♦️ಜಿದ್ದಾ: ಒಂದು ಹೊಸ ಸೇರ್ಪಡೆಯನ್ನು ಇನ್ನೂ ದೃಢೀಕರಿಸಲಾಗಿಲ್ಲ.

♦️ದಮಾಮ್: ಶರೀಫ್ ಚಕ್ಮಕ್ಕಿ ಮತ್ತು ನೂರ್ ತಿರ್ಥಹಳ್ಳಿ ಸಮಿತಿಯಿಂದ ಕೈ ಬಿಡಲಾಯಿತು, ಸೇರ್ಪಡೆ: ಅಯಾಝ್ ಚಿಕ್ಕಮಗಳೂರು ಮತ್ತು ಶಾಫಿ ಚಿಕ್ಕಮಗಳೂರು.

ಕೆಳಗಿನ ಬದಲಾವಣೆಗಳನ್ನು ಹೊರತುಪಡಿಸಿ ಜಿಲ್ಲಾ ಸಂಯೋಜಕರು ಹಾಗೆಯೇ ಮುಂದುವರಿಯುತ್ತಾರೆ:

- ತೀರ್ಥಳ್ಳಿ ವಲಯವನ್ನು ಮಹಮ್ಮದ್ ರಫಿ ಮತ್ತು ನಝೀರ್ ಜಯಪುರ ನಿರ್ವಹಿಸಲಿದ್ದಾರೆ.

ಪುನರಾಯ್ಕೆಯಾದ ಅಧ್ಯಕ್ಷ ಅಬ್ದುಲ್ ಸತ್ತಾರ್ ಜಯಪೂರ ಅವರು ಹಳೆಯ ಸಮಿತಿಯನ್ನು ಮರು ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಟ್ರಸ್ಟ್ ನ ಭವಿಷ್ಯಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಮಹಮ್ಮದ್ ರಫಿ ನೂತನ ಸಮಿತಿಯನ್ನು ಅಭಿನಂದಿಸಿ,  ಧನ್ಯವಾದ ಅರ್ಪಿಸಿದರು.

share
Next Story
X