ಮಾ.18ರಂದು ವಿದ್ಯುತ್ ಅದಾಲತ್

ಉಡುಪಿ, ಮಾ.16: ಮೆಸ್ಕಾಂ ಇಲಾಖೆಯ ವತಿಯಿಂದ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮಾರ್ಚ್18ರಂದು ಉಡುಪಿ ತಾಲೂಕಿನ ತೆಂಕನಿಡಿಯೂರು, ಕಾಪು ತಾಲೂಕಿನ ಮರ್ಣೆ ಹಾಗೂ ಬೆಳಪು, ಕಾರ್ಕಳ ತಾಲೂಕಿನ ನೀರೆ ಹಾಗೂ ಕೆದಿಂಜೆ, ಹೆಬ್ರಿ ತಾಲೂಕಿನ ಪಡುಕುಡೂರು, ಕುಂದಾಪುರ ತಾಲೂಕಿನ ವಂಡ್ಸೆ, ಉಳ್ಳೂರು ಹಾಗೂ ಗೋಪಾಡಿ, ಬೈಂದೂರು ತಾಲೂಕಿನ ಯಳಜಿತ್ ಮತ್ತು ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
Next Story