ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ಮಹಿಳಾ ಆರೋಗ್ಯ ಶಿಬಿರ

ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ವತಿಯಿಂದ ನಗರದ ನಲಪಾಡ್ ಕುನಿಲ್ ಟವರ್ಸ್ ಸಹಯೋಗದಲ್ಲಿ ನಲಪಾಡ್ ಸಮುದಾಯ ಭವನದಲ್ಲಿ ಇತ್ತೀಚೆಗೆ ಮಹಿಳಾ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.
ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಶಿಬಿರ ಉದ್ಘಾಟಿಸಿ ಮಾತನಾಡಿ ದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಎ.ಕೆ. ಸೀಮಾ ಭಾಗವಹಿಸಿ ಮಾತನಾಡಿದರು. ಪ್ರಸೂತಿ ತಜ್ಞೆ ಡಾ.ಸೌಧಾ ಆಲಂ ನವಾಝ್ ಪ್ರಾತ್ಯಕ್ಷಿಕೆಯ ಮೂಲಕ ಆರೋಗ್ಯ ಮಾಹಿತಿ ನೀಡಿದರು. ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ನಲಪಾಡ್ ಕುನಿಲ್ ಟವರ್ಸ್ ‘ಎ’ ಬ್ಲಾಕ್ ಅಧ್ಯಕ್ಷ ಮುಹಮ್ಮದ್ ಫೈರೋಝ್, ‘ಬಿ’ ಬ್ಲಾಕ್ ಕೋಶಾಧಿಕಾರಿ ಅಬ್ದುಲ್ ಸತ್ತಾರ್ ಭಾಗವಹಿಸಿದ್ದರು.
ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್ ಖಾಲಿದ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು. ನಲಪಾಡ್ ಕುನಿಲ್ ಟವರ್ಸ್ ಉಪಾಧ್ಯಕ್ಷ ಆಸಿಫ್ ಖಾನ್ ಸ್ವಾಗತಿಸಿದರು. ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ವಂದಿಸಿದರು. ಸಾದಾತ್ ಮತ್ತು ಫಝಲ್ ಕಿರಾಅತ್ ಪಠಿಸಿದರು.