ಬೆಂಗಳೂರು | ಕಾಮಗಾರಿ ವೇಳೆ ಗ್ಯಾಸ್ ಪೈಪ್ ಸೋರಿಕೆ: ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಾಯ

ಬೆಂಗಳೂರು, ಮಾ.16: ಅನಿಲ ಸಂಸ್ಕರಣೆ ಹಾಗೂ ವಿತರಣೆ ಮಾಡುವ ಗೇಲ್ ಸಂಸ್ಥೆಯು ನೆಲದಡಿಯಲ್ಲಿ ಅಳವಡಿಸಿದ್ದ ಅಡುಗೆ ಅನಿಲ ಸಂಪರ್ಕಿಸುವ ಪೈಪ್‌ನಲ್ಲಿ ಸೋರಿಕೆಯಾಗಿ ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟವಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಲೈಖಾ ಅಂಜುಮ್(45) ಮುಬಶ್ಶಿರಾ (40) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಎಚ್‌ಎಸ್‌ಆರ್ ಲೇಔಟ್‌ನ 2ನೆ ಹಂತದ ಮದೀನಾ ಮಸೀದಿ ಬಳಿ ಝಮೀರ್ ಅಹಮದ್ ಎಂಬುವವರಿಗೆ ಸೇರಿದ ಮನೆಯಲ್ಲಿ ಗುರುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ.
ರಸ್ತೆಯೊಂದರಲ್ಲಿ ಬೆಂಗಳೂರು ಜಲಮಂಡಳಿಯು (BWSSB) ಡ್ರೈನೇಜ್ ಪೈಪ್ ಅಳವಡಿಸುವ ಸಂದರ್ಭದಲ್ಲಿ ಗೇಲ್ ಕಂಪೆನಿ ಅಳವಡಿಸಿದ್ದ ಪೈಪ್‌ಗೆ ತಗುಲಿ ಸೋರಿಕೆಯಾಗಿದೆ. ಈ ಸಂಬಂಧ ಮನೆಯೊಂದರಲ್ಲಿದ್ದ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಸ್ಫೋಟದ ರಭಸಕ್ಕೆ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಇಬ್ಬರನ್ನೂ ಆಸ್ಪತ್ರೆ ದಾಖಲಿಸಲಾಗಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟ ದುರಂತದ ಪರಿಣಾಮ ಮನೆಯಲ್ಲಿರುವ ಪಿಠೋಪಕರಣಗಳು ಧ್ವಂಸಗೊAಡಿವೆ. ಮಾಹಿತಿ ಆಧರಿಸಿ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಸಂಬಂಧಪಟ್ಟ ಗೇಲ್ ಕಂಪೆನಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದರು.
ಗೇಲ್ ಗ್ಯಾಸ್ ಪೈಪ್ ಹಾದು ಹೋಗಿದೆ ಎಂದು ಬೋರ್ಡ್ ಸಹ ಅಳವಡಿಸಿಲ್ಲ. ಕಾಮಗಾರಿ ವೇಳೆ ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಪೈಪ್ ಲೈನ್ ಡ್ಯಾಮೇಜ್ ಆಗಿದೆ. ಜಮೀರ್ ಅವರ ಮನೆಯವರು ಅಡುಗೆ ಮಾಡುವುದಕ್ಕೆ ಹೋದಾಗ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
#Karnataka #Bengaluru
— Kiran Parashar (@KiranParashar21) March 16, 2023
3 persons were seriously injured after a GAIL pipeline broke and gas leaked into a couple of houses causing an explosion in HSR layout 7th sector. BWSSB was digging the road when the pipe broke. @IndianExpress pic.twitter.com/Qddfbi1npG