ಮಾ.18ರ ಮಿಷನ್ ಸಮಾವೇಶ ಯಶಸ್ವಿಗೊಳಿಸಲು ಸಮಸ್ತ ಮುಫತ್ತಿಶರುಗಳ ಒಕ್ಕೂಟ ಕರೆ
ಮಂಗಳೂರು, ಮಾ.16: ಉತ್ತರ ಕರ್ನಾಟಕ ಭಾಗಗಳಲ್ಲಿ ಧಾರ್ಮಿಕ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಳೆದ ಆರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ‘ನ್ಯಾಷನಲ್ ಮಿಷನ್ ಕರ್ನಾಟಕ’ ಇದರ ಶೈಕ್ಷಣಿಕ ಅಭಿಯಾನದ ಭಾಗವಾಗಿ ಮಾ.18ರಂದು ಉಳ್ಳಾಲದ ಹಝ್ರತ್ ಮೈದಾನದಲ್ಲಿ ನಡೆಯಲಿರುವ ‘ಮೆಸೇಜ್-2’ ಅಹ್ಲನ್ ರಮಝಾನ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಸಮಸ್ತ ಮುಫತ್ತಿಶುಗಳ ಒಕ್ಕೂಟ ಕರೆ ನೀಡಿದೆ.
ಸಮಸ್ತದ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ಹಾಗೂ ಬಹುಭಾಷಾ ವಾಗ್ಮಿ ಸಿಂಸಾರುಲ್ ಹಕ್ ಹುದವಿ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಉಮರ್ ದಾರಿಮಿ ಸಾಲ್ಮರ ಮನವಿ ಮಾಡಿದ್ದಾರೆ.
Next Story