ಸೌದಿಯ ಆಭರಣ ತಕ್ಷಣ ಮರಳಿಸಲು ಬ್ರೆಝಿಲ್ ಮಾಜಿ ಅಧ್ಯಕ್ಷರಿಗೆ ಸೂಚನೆ

ಬ್ರಸೀಲಿಯಾ, ಮಾ.16: ಅಧ್ಯಕ್ಷರಾಗಿದ್ದಾಗ ಸೌದಿ ಅರೆಬಿಯಾದಿಂದ ಪಡೆದಿದ್ದ ಅಮೂಲ್ಯ ಆಭರಣಗಳನ್ನು 5 ದಿನದೊಳಗೆ ಅಧ್ಯಕ್ಷರ ನಿವಾಸಕ್ಕೆ ಮರಳಿಸುವಂತೆ ಬ್ರೆಝಿಲ್ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸನಾರೊಗೆ ಬ್ರೆಝಿಲ್ ನ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಅಲ್ಲದೆ, 2019ರಲ್ಲಿ ಯುಎಇಯಿಂದ ಉಡುಗೊರೆಯಾಗಿ ಪಡೆದಿದ್ದ ಎರಡು ಬಂದೂಕುಗಳನ್ನು ಸರಕಾರಕ್ಕೆ ಹಿಂದಿರುಗಿಸುವಂತೆ, ಬೊಲ್ಸನಾರೊ ಅಧಿಕಾರಾವಧಿಯಲ್ಲಿ ಪಡೆದಿರುವ ಎಲ್ಲಾ ಸರಕಾರಿ ಉಡುಗೊರೆಗಳ ಆಡಿಟ್(ಪರಿಶೀಲನೆ) ನಡೆಸುವಂತೆಯೂ ಫೆಡರಲ್ ಕೋರ್ಟ್ ಆಫ್ ಅಕೌಂಟ್ಸ್(ಟಿಸಿಯು) ಆದೇಶಿಸಿದೆ.
ಬ್ರೆಝಿಲ್ ಕಾನೂನಿನ ಪ್ರಕಾರ, ವೈಯಕ್ತಿಕವಾಗಿ ಪಡೆದಿದ್ದ ಮತ್ತು ಕನಿಷ್ಟ ಮೌಲ್ಯದ ಉಡುಗೊರೆಗಳನ್ನು ಮಾತ್ರ ಅಧಿಕಾರಿಗಳು ತಮ್ಮ ಬಳಿಯಲ್ಲಿ ಇರಿಸಿಕೊಳ್ಳಬಹುದಾಗಿದೆ.
Next Story