ರಶ್ಯ, ಚೀನಾ, ಇರಾನ್ ಜಂಟಿ ನೌಕಾ ಕವಾಯತು ಆರಂಭ
ಮಾಸ್ಕೋ, ಮಾ.16: ಅರೇಬಿಯನ್ ಸಮುದ್ರದಲ್ಲಿ ಚೀನಾ ಮತ್ತು ಇರಾನ್ನೊಂದಿಗೆ ನೌಕಾ ಕವಾಯತನ್ನು ಆರಂಭಿಸಿರುವುದಾಗಿ ರಶ್ಯ ಹೇಳಿದೆ.
`ಸಾಗರ ಭದ್ರತಾ ಬೆಲ್ಟ್ 2023' ಎಂದು ಕರೆಯಲಾಗುವ ತ್ರಿಪಕ್ಷೀಯ ನೌಕಾ ಕವಾಯತು ಇರಾನ್ನ ಚಬಹಾರ್ ಬಂದರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಾರಂಭವಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ. ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ ಜಾಗತಿಕ ವೇದಿಕೆಯಲ್ಲಿ ಒಬ್ಬಂಟಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಚೀನಾ ಮತ್ತು ಇರಾನ್ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಲು ರಶ್ಯ ಪ್ರಯತ್ನಿಸುತ್ತಿದೆ.
Next Story