ಟಿಕ್ಟಾಕ್ ನಿಷೇಧಿಸಿದ ಬ್ರಿಟನ್

ಲಂಡನ್, ಮಾ.16: ಸರಕಾರಿ ಸಾಧನಗಳಲ್ಲಿ ಟಿಕ್‌ಟಾಕ್ ಆ್ಯಪ್ ಬಳಸುವುದನ್ನು ತಕ್ಷಣದಿಂದ ಜಾರಿಯಾಗುವಂತೆ ನಿಷೇಧಿಸಲಾಗಿದೆ ಎಂದು ಬ್ರಿಟನ್ನ ಸಚಿವ ಒಲಿವರ್ ಡೌಡನ್ ಗುರುವಾರ ಹೇಳಿದ್ದಾರೆ.
ಸರಕಾರದ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಒಳಗೊಂಡಿರುವ ಸಾಧನಗಳನ್ನು ಟಿಕ್ಟಾಕ್ ಬಳಸುವುದರಿಂದ ಆಗಬಹುದಾದ ಅಪಾಯದ ಸಾಧ್ಯತೆಯನ್ನು ಮನಗಂಡು ಮುನ್ನೆಚ್ಚರಿಕೆಯ ಕ್ರಮವಾಗಿ ಈ ನಿಷೇಧ ಜಾರಿಗೊಳಿಸಲಾಗಿದೆ. ಸರಕಾರದಿಂದ ಅನುಮೋದನೆ ಪಡೆದ ಆ್ಯಪ್ಗಳನ್ನು ಮಾತ್ರ ಬಳಸಬಹುದಾದ ವ್ಯವಸ್ಥೆಯನ್ನು ಜಾರಿಗೊಳಿಸಲಿದ್ದೇವೆ ಎಂದವರು ಹೇಳಿದ್ದಾರೆ.
Next Story