ಸಿಕಂದರಾಬಾದ್:ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಅವಘಡ; ಕನಿಷ್ಠ ಆರು ಬಲಿ, ಹಲವರು ಸಿಕ್ಕಿಕೊಂಡಿರುವ ಶಂಕೆ

ಸಿಕಂದರಾಬಾದ್: ಸಿಕಂದರಾಬಾದ್‌ನ ಜನಪ್ರಿಯ ವಾಣಿಜ್ಯ ಸಂಕೀರ್ಣ ಸ್ವಪ್ನಲೋಕ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು,ಹಲವರು ಕಾಂಪ್ಲೆಕ್ಸ್‌ನೊಳಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ರಾತ್ರಿ 7:30ರ ಸುಮಾರಿಗೆ ಕಾಂಪ್ಲೆಕ್ಸ್‌ನ 7 ಮತ್ತು 8ನೇ ಮಹಡಿಗಳಲ್ಲಿ ಹೊಗೆ ಕಾಣಿಸಿಕೊಂಡಿದ್ದು,ಕ್ಷಣಾರ್ಧದಲ್ಲಿ ಬೆಂಕಿ ಎರಡೂ ಅಂತಸ್ತುಗಳನ್ನು ಆವರಿಸಿಕೊಂಡಿತ್ತು. ತೆಲಂಗಾಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು,ಡಝನ್‌ಗೂ ಅಧಿಕ ಅಗ್ನಿಶಾಮಕ ಯಂತ್ರಗಳು ತಡರಾತ್ರಿಯವರೆಗೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಎತ್ತರದ ಕ್ರೇನ್‌ಗಳನ್ನು ಬಳಸಿ ಹಲವರನ್ನು ಕಟ್ಟಡದಿಂದ ಹೊರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Breaking massive fire breaks out in Swapnalok Complex, Secunderabad Hyderabad several people are feared trapped in the building.#Hyderabad #firesafety pic.twitter.com/dAu1b7ouAZ
— Azmath Jaffery (@JafferyAzmath) March 16, 2023







