'ವಿಶ್ವ ನಿದ್ರಾ ದಿನ'ದಂದು ವೈರಲ್ ಆಯಿತು ನಾಗಾಲ್ಯಾಂಡ್ ಸಚಿವರ ಪೋಸ್ಟ್

ಹೊಸದಿಲ್ಲಿ: ತಮ್ಮ ಹಾಸ್ಯಪ್ರಜ್ಞೆಗೆ ಹೆಸರು ಪಡೆದಿರುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ವಿಶ್ವ ನಿದ್ರಾ ದಿನದಂದು ಪೋಸ್ಟ್ ಮಾಡಿರುವ ಫೋಟೋ ಒಂದು ವೈರಲ್ ಆಗಿದೆ.
ಈ ಚಿತ್ರದಲ್ಲಿ ಕೊಠಡಿಯೊಂದರಲ್ಲಿ ಸಚಿವರು ಒಂದು ಕುರ್ಚಿಯಲ್ಲಿ ಕುಳಿತಿರುವುದು ಹಾಗೂ ಅದೇ ಕೊಠಡಿಯಲ್ಲಿನ ಇತರ ಕುರ್ಚಿಗಳಲ್ಲಿ ಆಸೀನರಾದವರಲ್ಲಿ ಹೆಚ್ಚಿನವರು ತೂಕಡಿಸುತ್ತಿರುವುದು ಕಾಣಿಸುತ್ತದೆ. ದೀರ್ಘ ಚರ್ಚೆ ಅಥವಾ ಭಾಷಣಗಳನ್ನು ಕೇಳಿ ಬೇಸತ್ತು ಹಲವರು ಹೀಗೆ ನಿದ್ದೆಗೆ ಜಾರುತ್ತಾರೆ ಎಂಬ ಅಂಶವನ್ನು ಎತ್ತಿ ಹೇಳುವ ಪ್ರಯತ್ನ ಈ ಚಿತ್ರದ ಮೂಲಕ ಸಚಿವರು ಮಾಡಿದ್ದಾರೆ.
ಈ ಚಿತ್ರದೊಂದಿಗೆ ತಮ್ಮ ಫಾಲೋವರ್ಸ್‌ಗೆ ಹ್ಯಾಪಿ ಸ್ಲೀಪ್ ಡೇ ಎಂದು ಸಚಿವರು ವಿಶ್ ಮಾಡಿದ್ದಾರೆ.
"ಈ ದಿನದಂದು ಚಿಕ್ಕ ಕಣ್ಣುಗಳಿರುವ ಜನರನ್ನು ಶ್ಲಾಘಿಸಲು ಸ್ವಲ್ಪ ಸಮಯ ಮಾಡಿಕೊಳ್ಳೋಣ, ದಿನದ 24 ಗಂಟೆಯೂ ಎಚ್ಚರದಿಂದಿರಬೇಕೆಂಬುದು ಸದಾ ಒಂದು ಆಯ್ಕೆಯಾಗದು ಎಂದು ಈ ಜನರು ನೆನಪಿಸುತ್ತಾರೆ," ಎಂದು ಸಚಿವರು ಬರೆದಿದ್ದಾರೆ.
ಸಚಿವರ ಈ ಪೋಸ್ಟ್‌ಗೆ ಹಲವರು ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ. "ಚಿಕ್ಕ ಕಣ್ಣುಗಳಿರುವ ಲಾಭವೇನೆಂದರೆ, ನಿದ್ದೆ ಮಾಡುತ್ತಿದ್ದರೂ, ಭಾಷಣ ಆಲಿಸುತ್ತಿರುವಂತೆ ನಟಿಸಬಹುದಾಗಿದೆ," ಎಂದು ಒಬ್ಬರು ಬರೆದಿದ್ದಾರೆ.
Happy World Sleep Day!
— Temjen Imna Along (@AlongImna) March 17, 2023
Let us take a moment to appreciate people with small eyes, who remind us that being awake 24/7 isn't always a choice! pic.twitter.com/gziShXYMum
To many lens to focus,
— Temjen Imna Along (@AlongImna) March 15, 2023
Magar Mera Timing toh Dekho! pic.twitter.com/HskLwLuN1d







