ಎರಡು ತಿಂಗಳಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಕಸದ ಬುಟ್ಟಿಗೆ ಸೇರಲಿದೆ : ಹರೀಶ್ ಕುಮಾರ್

ಮಂಗಳೂರು, ಮಾ.17: ರಾಜ್ಯದಲ್ಲಿ ಇನ್ನು ಎರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯದ್ದು, ಈ ಚುನಾವಣೆಯ ಬಳಿಕ ಬಿಜಪಿ ನೇತೃತ್ವದ ಸರಕಾರ ಕಸದ ಬುಟ್ಟಿಗೆ ಸೇರುತ್ತದೆ. ಕಾಂಗ್ರೆಸ್ ನಮಗೆ ಇದು ಸಂತೋಷವಾದರೆ ಬಿಜೆಪಿ ನಾಯಕರಿಗೆ ಇದು ಸ್ವಲ್ಪ ನೋವಾಗಬಹುದು ಎಂದು ವಿಧಾನ ಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಪತನಗೊಂಡು ಕಾಂಗ್ರೆಸ್ ನೇತೃತ್ವದ ಜನಪರ ಸರಕಾರ ಬರುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಬಿಜೆಪಿಯವರಿಗೆ ಅಭಿವೃದ್ಧಿ, ಸಾಮರಸ್ಯ ಯಾವುದೂ ಬೇಡ ದೈವ-ದೇವರುಗಳು ಇವರಿಗೆ ಬೇಕಾಗಿರುವುದು ವೋಟಿಗಾಗಿ ಮಾತ್ರ. ವೋಟಿಗಾಗಿ ದೇವರನ್ನು ದೈವಗಳನ್ನು ಕೊಂಡಾಡುತ್ತಾರೆ. ಭೂತದ ಹತ್ತಿರ ಹೋಗಿ ಟಿಕೆಟ್ ಕೂಡಾ ಬೇಡಿಕೊಳ್ಳುತ್ತಾರೆ. ಆದರೆ ಗೆದ್ದ ಬಳಿಕ ದೈವ -ದೇವರುಗಳನ್ನು ಹೀಯಾಳಿಸುವ ಅಭ್ಯಾಸವನ್ನು ಮಾಡುತ್ತಿದ್ದಾರೆ. ಸುಳ್ಳು ಹೇಳುವುದು, ಲಂಚ ಪಡೆಯುವುದು, ಸರಕಾರ ಮಾಡುವುದು, ಭ್ರಷ್ಟಾಚಾರ ಮಾಡುವುದು, ಜನರ ಭಾವನೆಗಳನ್ನು ಕೆರಳಿಸುವುದು ಇವರ ಉದ್ದೇಶವಾಗಿದೆ ಎಂದರು.
ರಾಜ್ಯದಲ್ಲಿ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸತ್ತು. ಈಗ ಬಿಜೆಪಿ ಸರಕಾರ 4 ವಚರ್ಷಗಳಲ್ಲಿ ಕೊಟ್ಟಿರುವ ಶೇ 40 ಭಾಗದಷ್ಟುನಪೂರೈಸಲು ಸಾಧ್ಯವಾಗಲಿಲ್ಲ. ಸುಳ್ಳು ಕಂತೆಗಳನ್ನು ಹೊತ್ತುಕೊಂಡು ವಿಜಯ ಸಂಕಲ್ಪ ಯಾತ್ರೆ ಮಾಡುತ್ತದೆ. ಮುಂದೆ ಅವರಿಗೆ ವಿಜಯ ಯಾತ್ರೆ ಮಾಡಲು ಅವಕಾಶ ಇಲ್ಲ್ಲ. ಕಾಂಗ್ರೆಸ್‌ನ ಮೂರು ಭರವಸೆಗಳು ಬಿಜೆಪಿ ಸರಕಾರ ವನ್ನು ತೀರ್ಥಯಾತ್ರೆಗೆ ಕಳುಹಿಸುತ್ತದೆ ಎಂದು ಹೇಳಿದರು.
ನಾವು ಏಳು ಕೆಜಿ ಅಕ್ಕಿ ಬಡವರಿಗೆ ಕೊಟ್ಟಿದ್ದೇವೆ. ಅದನ್ನು 5ಕ್ಕೆ ಇಳಿಸಿದ್ದು, ಕೊರೋನ ಸಂದರ್ಭದಲ್ಲಿ ಬಡವರ ಬಟ್ಟೆಗೆ ಹೊಡೆದದ್ದು ಬಿಜೆಪಿ ಸರಕಾರ. ಕಾಂಗ್ರೆಸ್ ಮಾಡಿದ್ದ ಇಂದಿರಾ ಕ್ಯಾಂಟಿನ್ ವ್ಯವಸ್ಥೆಯನ್ನು ಬಂದ್ ಮಾಡಿ ಬಡವರಿಗೆ ತೊಂದರೆ ಮಾಡಿದೆ ಎಂದರು. ಅದನ್ನು ಇಲ್ಲದಂತೆ ಮಾಡಿದರು ಎಂದು ನುಡಿದರು.
ಮೂರು ಗ್ಯಾರೆಂಟಿಯೊಂದಿಗೆ ಇನ್ನೊಂದು ಗ್ಯಾರೆಂಟಿ ಸೇರಲಿದೆ. ಬೆಳಗಾವಿಯಲ್ಲಿ ಮಾ.20ರಂದು ನಡೆಯುವ ಕಾಂಗ್ರೆಸ್‌ನ ಯುವ ಸಂಗಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಅವರು ಯುವಕರಿ ಗಾಗಿ ಒಂದು ಗ್ಯಾರೆಂಟಿಯನ್ನು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೈವದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ಮಾರ್ಚ್ 24ನೇ ತಾರೀಕಿಗೆ ಸಚಿವ ರಾಮಲು ಮೀಟಿಂಗ್ ಕರೆದಿದ್ದಾರೆ. ಅದರಲ್ಲಿ ಖಾಸಗಿ ಬಸ್‌ಗಳು 24 ಕಿ.ಮಿ. ಕೆಎಸ್‌ಆರ್‌ಟಿಸಿ ಮಾರ್ಗದಲ್ಲಿ ಸಾಗಲು ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಕೆಎಸ್‌ಆರ್‌ಟಿಸಿ ಈಗಾಗಲೇ ನಷ್ಟದಲ್ಲಿದೆ. ಅದನ್ನು ಪೂರ್ಣವಾಗಿ ಮಳುಗಿಸುವ ಪ್ರಯತ್ನ ಇದಾಗಿದೆ.ಇದನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು. ಚುನಾವಣೆ ಘೋಷಣೆಯಾಗುವ ಮೊದಲು ಕ್ಯಾಬಿನೆಟ್‌ನಲ್ಲಿ ಮಸೂದೆ ಮಂಡನೆಗೆ ತಯಾರಿ ನಡೆದಿದೆ. ಇದರ ಹಿಂದೆ 50 ಕೋಟಿ ರೂ. ಡೀಲ್ ನಡೆದಿದೆ ಎಂಬ ಆರೋಪ ಕೇಳಿ ಬರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮುಖಂಡರಾದ ಮಹಾಬಲ ಮಾರ್ಲ, ಮೊಹಮ್ಮದ್ ಕುಂಜತ್ತಬೈಲ್, ಉದಯ ಆಚಾರ್ಯ, ಸಲೀಂ ಪಾಂಡೇಶ್ವರ ಉಪಸ್ಥಿತರಿದ್ದರು.