ಪಡುಬಿದ್ರಿ: ಹನಫಿ ಜಾಮಿಯಾ ಮಸೀದಿ ಉದ್ಘಾಟನೆ

ಪಡುಬಿದ್ರಿ: ಇಲ್ಲಿನ ದೀನ್ ಸ್ಟ್ರೀಟ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನೂರಾನಿಯ ಹನಫಿ ಜಾಮಿಯಾ ಮಸೀದಿಯ ಉದ್ಘಾಟನೆ ಶುಕ್ರವಾರ ನಡೆಯಿತು.
ಜುಮಾ ನಮಾಜಿನ ನೇತೃತ್ವ ಹಾಗೂ ವಕ್ಫ್ ವಿಧಿನಿರ್ವಹಣೆಯನ್ನು ಮೌಲಾನಾ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ನೆರವೇರಿಸಿದರು. ಇದಕ್ಕೂ ಮೊದಲು ನಡೆದ ಸೌಹಾರ್ದ ಸಂಗಮವನ್ನು ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ. ಮೊಹಿದ್ದೀನ್ ಲಚ್ಚಿಲ್ ಉದ್ಘಾಟಿಸಿದರು. ಪಡುಬಿದ್ರಿ ಜುಮಾ ಮಸೀದಿಯ ಕತೀಬ್ ಎಸ್.ಎಂ. ಅಬ್ದುಲ್ ರಹಿಮಾನ್ ದುವಾ ನೆರವೇರಿಸಿದರು. ನೂರಾನಿಯಾ ಹನಫಿ ಜುಮ್ಮಾ ಮಸ್ಜಿದ್ ಖತೀಬ್ ಮೆಹಬೂಬ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಸರ್ವಧರ್ಮ ಸಮನ್ವಯತೆಯು ಇಂದಿನ ಅಗತ್ಯತೆಯಾಗಿದೆ. ಉಡುಪಿ ಜಿಲ್ಲೆಯು ಮತೀಯ ಸೌಹಾರ್ದತೆಯಲ್ಲಿ ರಾಜ್ಯಕ್ಕೇ ಮಾದರಿಯಾಗಿದೆ ಎಂದರು.
ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಪಿ. ರವೀಂದ್ರನಾಥ್ ಜಿ. ಹೆಗ್ಡೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆಪಿಸಿಸಿ ಕೋರ್ಡಿನೇಟರ್ ನವೀನ್‍ಚಂದ್ರ ಶೆಟ್ಟಿ, ಪಡುಬಿದ್ರಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಖಾದಿ ಮತ್ತು ಗ್ರಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್ ಆರ್.ಹೆಗ್ಡೆ, ಅನಿವಾಸಿ ಉದ್ಯಮಿ ಮಹಮ್ಮದ್ ಶರೀಫ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೈ. ಸುಕುಮಾರ್, ಅಂಬೇಡ್ಕರ್ ಯುವ ಸೇನೆ ಕಾಪು ತಾಲ್ಲೂಕು ಅಧ್ಯಕ್ಷ ಲೋಕೇಶ್ ಕಂಚಿನಡ್ಕ, ಹಾಜಿ ವೈ. ಸಾಬಿರ್ ಆಲಿ ಎರ್ಮಾಳು, ಶುಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹಾಜಿ ವೈ. ನಾಝಿರ್ ಅಲಿ ಎರ್ಮಾಳು, ಅನ್ಸಾರ್ ಶೇಖ್ ಜಿದ್ದಾ ಎರ್ಮಾಳು, ಎಂ. ಕೆ. ಅಬ್ದುಲ್ ಜಲೀಲ್, ಮನ್ಸೂರ್ ಶಾ, ಅಕ್ಬರ್ ಅಲಿ ಮಹಮ್ಮದ್ ರಫೀಕ್, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಎನ್. ಶೆಟ್ಟಿ, ಮಹಮ್ಮದ್ ನಿಯಾಝ್, ರಮೀಝ್ ಹುಸೇನ್, ಎಂ.ಎಸ್. ಶಫಿ, ಮಾಜಿ ಸದಸ್ಯ ಬುಡಾನ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಶಬ್ಬೀರ್ ಹುಸೈನ್, ಮಹಮ್ಮದ್ ಷರೀಫ್ ಮೂಡುಬಿದ್ರಿ, ಜಮೀಯತುಲ್ ಫಲಾಹ್ ಉಡುಪಿ-ದಕ ಅಧ್ಯಕ್ಷ ಶಬಿ ಅಹಮ್ಮದ್ ಖಾಝಿ, ಮೆಹಬೂಬ್ ಶರೀಫ್, ಮನ್ಸೂರ್ ಅಲಿ ಕೊಪ್ಪ, ಶೇಖ್ ಇಸ್ಮಾಯಿಲ್ ಮಾಸ್ಟರ್, ಮಸೀದಿಯಲ್ಲಿ ಕಾರ್ಯನಿರ್ವಹಿಸಿದ ಮೌಲಾನಾ ಇಕ್ಬಾಲ್ ನೂರಿ, ಮೌಲಾನಾ ಇದ್ರಿಸ್ ಅವರನ್ನು ಸಮ್ಮಾನಿಸಲಾಯಿತು.
ಎಂ. ಪಿ. ಮೊಯ್ದಿನಬ್ಬ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಫಿಯುಲ್ಲಾ ಮಾಸ್ಟರ್ ವಂದಿಸಿದರು.