ಡಾ.ಪೂಜಾಶ್ರೀ ಚೆಟ್ಟಿಮಾಡಗೆ ಪಿಎಚ್‍ಡಿ ಪದವಿ

ಸುಳ್ಯ: ಡಾ.ಪೂಜಾಶ್ರೀ ಚೆಟ್ಟಿಮಾಡ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿಎಚ್‍ಡಿ ಪದವಿ ಲಭಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ಬಳಸಿ ಸಮಗ್ರ ಜಲಾನಯನ ಅಭಿವೃದ್ದಿ ಯೋಜನೆ ಎಂಬ ವಿಷಯದಲ್ಲಿ ಡಾ.ಎಚ್.ಗಂಗಾಧರ ಭಟ್ ಅವರ ಮಾರ್ಗದರ್ಶನದಲ್ಲಿ ಪೂಜಾಶ್ರೀ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ನೀಡಿದೆ. ಮಾ.15ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು.
ಸುಳ್ಯದ ಕನಿಕರಪಳ್ಳದ ಬಿ.ಕೆ.ಪುರುಷೋತ್ತಮ ಬೊಮ್ಮೆಟ್ಟಿ ಹಾಗು ಎನ್.ಸುಶೀಲಾ ಬೊಮ್ಮೆಟ್ಟಿ ದಂಪತಿಗಳ ಪುತ್ರಿಯಾದ ಡಾ.ಪೂಜಾಶ್ರಿ ಅಭಿಷೇಕ್ ಚೆಟ್ಟಿಮಾಡ ಅವರ ಪತ್ನಿ.
Next Story