Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 'ಎಲಾರಾ' ಬಗ್ಗೆ ಎದ್ದಿರುವ ಪ್ರಶ್ನೆಗಳು...

'ಎಲಾರಾ' ಬಗ್ಗೆ ಎದ್ದಿರುವ ಪ್ರಶ್ನೆಗಳು ಮತ್ತು ದೇಶದ ಭದ್ರತೆಯ ವಿಚಾರ

ಆರ್. ಕುಮಾರ್ಆರ್. ಕುಮಾರ್18 March 2023 12:05 AM IST
share
ಎಲಾರಾ ಬಗ್ಗೆ ಎದ್ದಿರುವ ಪ್ರಶ್ನೆಗಳು ಮತ್ತು ದೇಶದ ಭದ್ರತೆಯ ವಿಚಾರ

ಆರ್ಥಿಕತೆ ವಿಚಾರದಲ್ಲಿ ಆಟವಾಡಿದ್ದು ಆಯಿತು. ಈಗ ದೇಶದ ರಕ್ಷಣೆಯ ವಿಚಾರದಲ್ಲೂ ನಡೆಯುತ್ತಿರುವ ಈ ಆಟದ ಬಗ್ಗೆ ಸರಕಾರಕ್ಕೇಕೆ ಚಿಂತೆಯಾಗುತ್ತಿಲ್ಲ? ದೇಶದ ರಕ್ಷಣೆಗಿಂತ ಅದಾನಿ ಸಮೂಹವನ್ನು ರಕ್ಷಿಸುವ ಚಿಂತೆಯೇ ಹೆಚ್ಚಾಗಿದೆಯೆ? ಅದಾನಿ ಭಾರತದ ರಕ್ಷಣೆ ವಿಚಾರಕ್ಕಿಂತಲೂ ಮಹತ್ವದವರೇ? ಇಂಥ ಪ್ರಶ್ನೆಗಳು ಈಗ ಎದ್ದಿವೆ.


ಅದಾನಿ ಸಮೂಹದ ಭಾರೀ ಹಗರಣವನ್ನು ಬಯಲು ಮಾಡಿದ ಹಿಂಡನ್‌ಬರ್ಗ್, ಫೋರ್ಬ್ಸ್, ರಿಪೋರ್ಟರ್ಸ್ ಕಲೆಕ್ಟಿವ್ ವರದಿಗಳ ಬಳಿಕ ಈಗ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಮತ್ತೊಂದು ಬಹಳ ದೊಡ್ಡ ಪ್ರಶ್ನೆಯನ್ನೆತ್ತಿದೆ.

ದೇಶದ ರಕ್ಷಣಾ ವಲಯದಲ್ಲಿ ಒಪ್ಪಂದವನ್ನು ಹೊಂದಿರುವ ಅದಾನಿ ಸಮೂಹದ ಕಂಪೆನಿಯಲ್ಲಿ ಹಣ ಹಾಕಿರುವ 'ಎಲಾರಾ' ಎಂಬ ವಿದೇಶಿ ಕಂಪೆನಿ ಯಾರಿಗೆ ಸೇರಿದ್ದು? ಅದು ಹಾಕುತ್ತಿರುವ ದುಡ್ಡು ಯಾರದ್ದು ಮತ್ತು ಅಂತಿಮವಾಗಿ ಅದರ ಲಾಭ ಸೇರುತ್ತಿರುವುದು ಯಾರಿಗೆ? ಇವು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಎತ್ತಿರುವ ಮಹತ್ವದ ಪ್ರಶ್ನೆಗಳು.

ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂದೀಪ್ ಸಿಂಗ್, ರಿತು ಸರೀನ್, ಅಮ್ರಿತಾ ನಾಯಕ್ ದತ್ತಾ ಅವರ ತನಿಖಾ ವರದಿಯ ಪ್ರಕಾರ, ಎಲಾರಾ ಇಂಡಿಯಾ ಆಪರ್ಚುನಿಟೀಸ್ ಫಂಡ್ (ಎಲಾರಾ ಐಒಎಫ್), ಎಲಾರಾ ಕ್ಯಾಪಿಟಲ್ ಎಂಬ ಇಂಗ್ಲೆಂಡ್ ಮೂಲದ ಕಂಪೆನಿಗೆ ಸೇರಿದೆ. ಮಾರಿಷಸ್ ನೋಂದಾಯಿತ ಈ ಕಂಪೆನಿ, ಅದಾನಿ ಸಮೂಹದ ಕಂಪೆನಿಗಳಲ್ಲಿನ ಅತಿ ದೊಡ್ಡ ಹೂಡಿಕೆದಾರ. ಮೂರು ಅದಾನಿ ಕಂಪೆನಿಗಳಲ್ಲಿನ ಅದರ ಷೇರುಗಳು ಡಿಸೆಂಬರ್ 2022ರಲ್ಲಿ 9,000 ಕೋಟಿ ರೂ.

ಇಂಡಿಯನ್ ಎಕ್ಸ್‌ಪ್ರೆಸ್ ತನಿಖೆ ಮಾಡಿರುವ ದಾಖಲೆಗಳ ಪ್ರಕಾರ, ಇದು ಬೆಂಗಳೂರು ಮೂಲದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಎಡಿಟಿಪಿಎಲ್) ಎಂಬ ಡಿಫೆನ್ಸ್ ಕಂಪೆನಿಯಲ್ಲಿ ಅದಾನಿ ಗ್ರೂಪ್ ಜೊತೆಗೇ ತಾನೂ ಪ್ರವರ್ತಕ ಘಟಕವಾಗಿದೆ. ಅಂದರೆ, ಹೂಡಿಕೆದಾರ ಕಂಪೆನಿಯೇ ಸಹಮಾಲಕ ಕಂಪೆನಿಯೂ ಆಗಿದೆ. ಇಸ್ರೋ ಮತ್ತು ಡಿಆರ್‌ಡಿಒ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುವ ಈ ಡಿಫೆನ್ಸ್ ಕಂಪೆನಿ ಕ್ಷಿಪಣಿ ಮತ್ತು ರಾಡಾರ್ ವ್ಯವಸ್ಥೆಗಳ ನವೀಕರಣ ಮತ್ತು ಡಿಜಿಟೈಸ್ ಮಾಡಲು 2020ರಲ್ಲಿ ರಕ್ಷಣಾ ಸಚಿವಾಲಯದ ಜೊತೆ 590 ಕೋಟಿ ರೂ.ಗಳ ಒಪ್ಪಂದ ಹೊಂದಿದೆ. ಇದರ ಬಹುದೊಡ್ಡ ಪ್ರವರ್ತಕ ಕಂಪೆನಿ ವಸಾಕಾ ಪ್ರಮೋಟರ್ಸ್ ಮತ್ತು ಡೆವಲಪರ್ಸ್. ಆದರೆ ವಸಾಕಾ ಮೇಲೆ ಸಂಪೂರ್ಣ ಹಿಡಿತ ಹೊಂದಿರುವುದು, ಅದರ ಅತಿದೊಡ್ಡ ಷೇರುದಾರ ಕಂಪೆನಿಯಾಗಿರುವ ಎಲಾರಾ ಐಒಎಫ್.

ಇನ್ನೊಂದೆಡೆ, ಎಡಿಟಿಪಿಎಲ್‌ನಲ್ಲಿ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಆ್ಯಂಡ್ ಟೆಕ್ನಾಲಜೀಸ್ ಲಿಮಿಟೆಡ್ ಶೇ. 26ರಷ್ಟು ಷೇರು ಹೊಂದಿದೆ. ದಾಖಲೆಗಳ ಪ್ರಕಾರ, ಎಡಿಟಿಪಿಎಲ್‌ನ ಮಾಲಕತ್ವ, ಶೇ.56.7ರಷ್ಟು ಪಾಲು ಹೊಂದಿರುವ ವಸಾಕಾ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನದ್ದಾಗಿದೆ. ಈ ವಸಾಕಾವನ್ನೇ ಬಹುತೇಕ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎಲಾರಾ ಮತ್ತು ಅದಾನಿ ಒಟ್ಟಾಗಿ ಎಡಿಟಿಪಿಎಲ್‌ನಲ್ಲಿ ಬಹುದೊಡ್ಡ ಪಾಲನ್ನು ಅಂದರೆ ಶೇ. 51.65ರಷ್ಟನ್ನು ಹೊಂದಿರುವುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಬಹಿರಂಗಪಡಿಸಿದೆ.
ಅಲ್ಲಿಗೆ, ದೇಶದ ರಕ್ಷಣಾ ವ್ಯವಸ್ಥೆಯ ಜೊತೆ ಕೆಲಸ ಮಾಡುತ್ತಿರುವುದು ಒಂದು ವಿದೇಶಿ ಕಂಪೆನಿ ಎಂಬುದು ಬಯಲಾಗಿದೆ.

ಈಗ ಪ್ರಶ್ನೆಯಿರುವುದೇ ಇಲ್ಲಿ. ಅದಾನಿ ಡಿಫೆನ್ಸ್ ಕಂಪೆನಿಯ ಪಾಲುದಾರ ಕಂಪೆನಿಯಲ್ಲಿರುವುದು ಯಾರ ದುಡ್ಡು? ಆ ಕಂಪೆನಿಯನ್ನು ನಿಯಂತ್ರಿಸುತ್ತಿರುವವರು ಯಾರು? ಅದರಲ್ಲಿ ಹೂಡಿಕೆ ಮಾಡುತ್ತಿರುವವರು ಯಾರು ಎಂಬುದೇ ಗೊತ್ತಿಲ್ಲದೆ ಹೇಗೆ ಇಂಥದೊಂದು ಹೊಣೆ ವಹಿಸಲಾಗಿದೆ? ಗೊತ್ತೇ ಇರದ ವಿದೇಶಿ ಕಂಪೆನಿಯೊಂದಕ್ಕೆ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟ ಹೊಣೆ ವಹಿಸಿದ್ದು ಯಾಕೆ? ಯಾರೆಂಬುದೇ ಗೊತ್ತಿಲ್ಲದ ವಿದೇಶಿ ಕಂಪೆನಿಯೊಂದಕ್ಕೆ ಇಸ್ರೋ, ಡಿಆರ್‌ಡಿಒ ಜೊತೆಗಿನ ಕೆಲಸ ಹೇಗೆ ಸಿಕ್ಕಿದೆ? ಅಂತಿಮವಾಗಿ ಆ ಕಂಪೆನಿಯ ಮೂಲಕ ಲಾಭ ಹೋಗುತ್ತಿರುವುದು ಯಾರಿಗೆ? ಎಂಬುದು ಈಗಿನ ಪ್ರಶ್ನೆ.

ಈ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಉತ್ತರಿಸುತ್ತಿಲ್ಲ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಬಳಿಕವೂ ಯಾವ ಕ್ರಮಕ್ಕೂ ಅದು ಮುಂದಾಗುವ ಯೋಚನೆ ಮಾಡಿದಂತಿಲ್ಲ. ಎಲ್ಲ ದಾಖಲೆಗಳ ಸಹಿತ ಹಿಂಡನ್‌ಬರ್ಗ್ ವರದಿ ಬಂದಾಗ ಅದನ್ನು ದೇಶದ ಮೇಲಿನ ದಾಳಿ ಎನ್ನಲಾಯಿತು. ಈಗ ಈ ವರದಿಯನ್ನೂ ಭಾರತದ ಮೇಲಿನ ದಾಳಿ ಎನ್ನುತ್ತದೆಯೆ? ರಕ್ಷಣಾ ಸಾಮಗ್ರಿ ಉತ್ಪಾದನೆ ವಿಚಾರದಲ್ಲಿಯೂ ಮಾರಿಷಸ್ ಕಂಪೆನಿಯ ಹೆಸರು ಕಾಣಿಸಿಕೊಂಡಿದೆ. ಮತ್ತೆ ಮತ್ತೆ ಮಾರಿಷಸ್ ಹೆಸರು ಯಾಕೆ ಬರುತ್ತಿದೆ? ಮೇಕ್ ಇನ್ ಇಂಡಿಯಾ ಎನ್ನುವ ಭಾರತ, ರಕ್ಷಣಾ ಉತ್ಪನ್ನ ವಿಚಾರದಲ್ಲಿ ಬೇರೆ ದೇಶವನ್ನೇಕೆ ನೆಚ್ಚಿದೆ? ಯಾಕೆ ಇಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ? ಅದಾನಿ ಎಂಬ ಒಂದೇ ಕಾರಣಕ್ಕೆ ಸರಕಾರ ಸುಮ್ಮನಿದೆಯೆ? ಇಂಥ ಹಲವಾರು ಪ್ರಶ್ನೆಗಳನ್ನು ಸರಕಾರ ಎದುರಿಸಬೇಕಿದೆ.

ದೇಶದ ಅರ್ಥವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸುವಂತೆ ಷೇರುಗಳ ಆಟ ಆಡಿದ ಆರೋಪ ಹೊತ್ತಿರುವ ಅದಾನಿ ಸಮೂಹದ ಹಿನ್ನೆಲೆಯಲ್ಲಿರುವುದು ಗೌತಮ್ ಅದಾನಿಯಲ್ಲ, ಅವರ ಸಹೋದರ ವಿನೋದ್ ಅದಾನಿ ಎಂಬುದು ಒಂದು ದಿನ ಬಯಲಾಗಿತ್ತು. ಅದಾದ ಮೇಲೆಯೂ ವಿನೋದ್ ಅದಾನಿ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಲಿಲ್ಲ. ಗೌತಮ್ ಅದಾನಿ ವ್ಯವಹಾರಗಳ ವಿಚಾರದಲ್ಲಿ ಏಳುತ್ತಿರುವ ಮುಗಿಯದಷ್ಟು ಪ್ರಶ್ನೆಗಳ ವಿಚಾರದಲ್ಲಿಯೂ ಸರಕಾರ ಸುಮ್ಮನಿದೆ. ವಿನೋದ್ ಅದಾನಿ ಮತ್ತು ಗೌತಮ್ ಅದಾನಿ ಈ ದೇಶದ ಕಾನೂನಿಗಿಂತಲೂ ದೊಡ್ಡವರೇ ಎಂಬ ಪ್ರಶ್ನೆಯೂ ಏಳುತ್ತದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ವಿನೋದ್ ಅದಾನಿ ಹೆಸರು ಬರುವುದಿಲ್ಲವಾದರೂ, ಅಂತಿಮ ಲಾಭ ಇಲ್ಲಿ ಹೋಗುತ್ತಿರುವುದು ಯಾರಿಗೆ ಎಂಬ ಪ್ರಶ್ನೆಯನ್ನು ಕಡೆಗಣಿಸಲಿಕ್ಕಾಗುವುದಿಲ್ಲ. ಆರ್ಥಿಕತೆ ವಿಚಾರದಲ್ಲಿ ಆಟವಾಡಿದ್ದು ಆಯಿತು. ಈಗ ದೇಶದ ರಕ್ಷಣೆಯ ವಿಚಾರದಲ್ಲೂ ನಡೆಯುತ್ತಿರುವ ಈ ಆಟದ ಬಗ್ಗೆ ಸರಕಾರಕ್ಕೇಕೆ ಚಿಂತೆಯಾಗುತ್ತಿಲ್ಲ? ದೇಶದ ರಕ್ಷಣೆಗಿಂತ ಅದಾನಿ ಸಮೂಹವನ್ನು ರಕ್ಷಿಸುವ ಚಿಂತೆಯೇ ಹೆಚ್ಚಾಗಿದೆಯೆ? ಅದಾನಿ ಭಾರತದ ರಕ್ಷಣೆ ವಿಚಾರಕ್ಕಿಂತಲೂ ಮಹತ್ವದವರೇ? ಇಂಥ ಪ್ರಶ್ನೆಗಳು ಈಗ ಎದ್ದಿವೆ.

ಹಿಂಡನ್‌ಬರ್ಗ್ ವರದಿ ವಿಚಾರವಾಗಿ ತನಿಖೆಗೆ ಸಮಿತಿಯನ್ನೇನಾದರೂ ರಚಿಸಲಾಗಿದೆಯೇ ಎಂದು ಕೇಳಿದರೆ ಸಂಸತ್ತಿನಲ್ಲಿ ಸಚಿವರಿಂದ ಇಲ್ಲ ಎಂಬ ಉತ್ತರ ಬರುತ್ತದೆ. ಸಂಸತ್ತಿನಲ್ಲೂ ಉತ್ತರವಿಲ್ಲ. ವಿಪಕ್ಷಗಳ ಪ್ರಶ್ನೆಗೂ ಉತ್ತರವಿಲ್ಲ. ಪ್ರಶ್ನಿಸಿದರೆ ಓಡಿಹೋಗಲಾಗುತ್ತದೆ. ಪ್ರಶ್ನಿಸಿದವರ ಬಾಯಿಮುಚ್ಚಿಸಲು ನೋಡಲಾಗುತ್ತದೆ. ಪ್ರಶ್ನಿಸಿದವರನ್ನು ಜೈಲಿಗೆ ಕಳಿಸಲಾಗುತ್ತದೆ. ಆದರೆ ಗೌತಮ್ ಅದಾನಿಗೊಂದು ನೋಟಿಸ್ ಕೊಡುವಷ್ಟು ಧೈರ್ಯವೂ ಸರಕಾರಕ್ಕೆ ಇಲ್ಲವೆ ಎಂದು ಜನರು ಕೇಳುವಂತಾಗಿದೆ.

ರಾಹುಲ್ ಗಾಂಧಿ ಕೂಡ ಈಗ ಎತ್ತಿರುವುದು, ಸಂಶಯಾಸ್ಪದ ವಿದೇಶಿ ಕಂಪೆನಿಗೆ ದೇಶದ ರಕ್ಷಣಾ ಸಾಧನಗಳ ನಿಯಂತ್ರಣ ನೀಡುವ ಮೂಲಕ ರಾಷ್ಟ್ರೀಯ ಭದ್ರತೆಯಲ್ಲಿ ಏಕೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಯನ್ನೇ. ವಿದೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದರಿಂದ ದೇಶಕ್ಕೆ ಅವಮಾನವಾಗಿದೆ ಎಂದು ಬೊಬ್ಬೆ ಹೊಡೆಯುವವರಿಗೆ, ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಕೆಲಸವೊಂದರ ಗುತ್ತಿಗೆಯನ್ನು ಕೊಡಲಾಗಿರುವ ವಿದೇಶಿ ಕಂಪೆನಿಯ ಮಾಲಕರ ಬಗ್ಗೆಯೇ ತಮಗೆ ಗೊತ್ತಿಲ್ಲ ಎಂಬುದು ಅಪಮಾನದ ವಿಚಾರ ಎನ್ನಿಸುತ್ತಿಲ್ಲವೆ ಎಂದು ಸಹಜವಾಗಿಯೇ ಅನುಮಾನವೇಳುತ್ತದೆ.
ಎಲಾರಾ ಕ್ಯಾಪಿಟಲ್ ನಿರ್ದೇಶಕ ಸ್ಥಾನದಲ್ಲಿದ್ದ, ಬ್ರಿಟನ್‌ನ ಮಾಜಿ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ರಾಜೀನಾಮೆ ನೀಡಿದ್ದಾರೆ. ಈ ವಿಚಾರವಾದರೂ ನಮ್ಮಲ್ಲಿನ ಸರಕಾರಕ್ಕೆ ಕೊಂಚವಾದರೂ ತಟ್ಟುವುದಿಲ್ಲವೆ? ಎಲ್ಲ ಅಧರ್ಮವನ್ನು ರಕ್ಷಿಸುವುದಕ್ಕಾಗಿ ಧರ್ಮದ ದುರ್ಬಳಕೆ ಆಗುತ್ತಿದೆ.

ರಾಷ್ಟ್ರೀಯತೆಯ ಹೆಸರಿನಲ್ಲಿ ರಾಜಕೀಯ ಮಾಡುವವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಸತ್ಯವನ್ನು ಹೇಳುವ ಸಾಹಸವನ್ನೂ ಮಾಡಬೇಕಲ್ಲವೆ ಎಂದು ಜನತೆ ಅಂದುಕೊಳ್ಳುವುದು ಸಹಜ.

ಷೇರು ಮಾರಾಟ ಪ್ರಕ್ರಿಯೆಯಲ್ಲಿ (ಎಫ್‌ಪಿಒ) ಹೂಡಿಕೆದಾರರ ಜೊತೆಗಿನ ಅದಾನಿ ನಂಟಿನ ಬಗ್ಗೆ ಸೆಬಿ ತನಿಖೆ ನಡೆಸುತ್ತಿದ್ದು, ಎಲಾರಾ ಕ್ಯಾಪಿಟಲ್ ಹಾಗೂ ಮೊನಾರ್ಕ್ ನೆಟ್ವರ್ತ್ ಕ್ಯಾಪಿಟಲ್ ಕೂಡ ಸೆಬಿ ಪರಿಶೀಲನೆಯ ವ್ಯಾಪ್ತಿಯಲ್ಲಿವೆ ಎಂಬ ವರದಿಗಳಿವೆ. ಎಲಾರಾ ಕ್ಯಾಪಿಟಲ್ ಮಾಲಕ ಯಾರೆಂಬುದು ಸೆಬಿಗೆ ಗೊತ್ತಾಗಬೇಕಿದೆ. ನಿಷ್ಪಕ್ಷ ತನಿಖೆಗೆ ಸರಕಾರ ಇನ್ನಾದರೂ ಮುಂದಾಗಲೇಬೇಕಾದ ಅಗತ್ಯವಿದೆ.

ಆ ಮೂಲಕ, ದೇಶದ ಮಾನ ಹೋಗುತ್ತಿರುವುದನ್ನು ತಡೆಯಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ದೇಶದ ರಕ್ಷಣೆಯಂಥ ಸೂಕ್ಷ್ಮ ವಿಚಾರದಲ್ಲಿ ಎಚ್ಚರಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಯಾರು ಎಲಾರಾ ಮಾಲಕ ಎಂಬುದರ ಜೊತೆಗೇ, ಎಲ್ಲದರ ಮಾಲಕನೂ ಒಬ್ಬನೇನಾ ಎಂಬ ಪ್ರಶ್ನೆಗೂ ಅವಶ್ಯವಾಗಿ ಉತ್ತರ ಕಂಡುಕೊಳ್ಳಬೇಕಿದೆ.

share
ಆರ್. ಕುಮಾರ್
ಆರ್. ಕುಮಾರ್
Next Story
X