ಮಂಗಳೂರು: ಟಿಡಿಎಫ್ ನಿಂದ ಆಭರಣ ಪ್ರದರ್ಶನಕ್ಕೆ ಚಾಲನೆ

ಮಂಗಳೂರು, ಮಾ.18: ಖ್ಯಾತ ಆಭರಣ ಬ್ರ್ಯಾಂಡ್ 'ಟಿಡಿಎಫ್ ಡೈಮಂಡ್ ಫ್ಯಾಕ್ಟರಿ'ಯಿಂದ ನಗರದ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಬೃಹತ್ ಆಭರಣ ಪ್ರದರ್ಶನ ಶನಿವಾರ ಆರಂಭಗೊಂಡಿತು.
ಆಭರಣ ಪ್ರದರ್ಶನವನ್ನು ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರ ಪತ್ನಿ ಮೈನಾ ಎಸ್. ಶೆಟ್ಟಿ, ಮಂಗಳೂರಿನ ರೂಪಾ ಹೋಟೆಲ್ ವ್ಯವಸ್ಥಾಪಕ ಪಾಲುದಾರರಾದ ವೈಶಾಲಿ ಸುವರ್ಣ, ಮಂದೀಪ್ ಮಾರ್ಬಲ್ಸ್ ವ್ಯವಸ್ಥಾಪಕ ನಿರ್ದೇಶಕ ಅಭಯ್ ಸಿಂಘ್ವಿ ಅವರ ಪತ್ನಿ ಸೀಮಾ ಸಿಂಘ್ವಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇನ್ ಲ್ಯಾಂಡ್ ಗ್ರೂಪ್ ಆಫ್ ಕಂಪೆನೀಸ್ ಅಧ್ಯಕ್ಷ ಸಿರಾಜ್ ಅಹ್ಮದ್ ಅವರ ಪತಿ ನೈಯರಾ ಸಿರಾಜ್, ಟಿಡಿಎಫ್ ಅಸೋಸಿಯೆಟ್ ಪಾರ್ಟ್ನರ್ ಸುಧಾ ಶೆಟ್ಟಿ, ಪ್ರತಿನಿಧಿ ವಿರಾಜ್ ಹೆಗ್ಡೆ ಉಪಸ್ಥಿತರಿದ್ದರು.
ಸಾರ್ವಜನಿಕರ ಬೇಡಿಕೆ ಮೇರೆಗೆ ಈ ಪ್ರದರ್ಶನ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ಈ ಋತುವಿನಲ್ಲಿ, ಟಿಡಿಎಫ್ ಆಯ್ದ ಚಿನ್ನ ಮತ್ತು ವಜ್ರದ ಆಭರಣಗಳಿಗೆ ಮೇಕಿಂಗ್ ಶುಲ್ಕದ ಮೇಲೆ ಗ್ರಾಹಕರಿಗೆ ಶೇ.100 ರಿಯಾಯಿತಿ ಸಿಗಲಿದೆ ಎಂದು ಪ್ರಕಟನೆ ತಿಳಸಿದೆ.
ಸೀಮಿತ ಅವಧಿಯ ಕೊಡುಗೆಯು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಭರಣಗಳನ್ನು ಖರೀದಿಸಲು ಉತ್ತಮ ಅವಕಾಶವಾಗಿದೆ. ಗ್ರಾಹಕರು ಕ್ಲಾಸಿಕ್ ಆಭರಣಗಳಿಂದ ಹಿಡಿದು ಸಮಕಾಲೀನ ಆಭರಣಗಳವರೆಗೆ ಯಾವುದೇ ಅಭಿರುಚಿ ಮತ್ತು ಸಂದರ್ಭಕ್ಕೆ ಒಪ್ಪುವ ವೈವಿಧ್ಯಮಯ ಶೈಲಿಗಳನ್ನು ನೋಡಬಹುದು. ಟಿಡಿಎಫ್ ನ ಬ್ರೈಡ್ ಪ್ರೈಡ್ ತಂಡವು ತಮ್ಮ ಗ್ರಾಹಕರಿಗೆ ವಿಶೇಷ ವಧುವಿನ ಪ್ಯಾಕೇಜ್ ಗಳನ್ನು ನೀಡುತ್ತಿದೆ. ಸಂಸ್ಥೆಯು ಅನುಭವಿ ವೃತ್ತಿಪರರನ್ನು ಒಳಗೊಂಡಿದ್ದು, ಗ್ರಾಹಕರು ತಮ್ಮ ಮದುವೆಗೆ ಸೂಕ್ತವಾದ ಆಯ್ಕೆಗಳನ್ನು ಮಾಡಲು ಮಾರ್ಗದರ್ಶನವನ್ನು ನೀಡುತ್ತದೆ.
ಇತ್ತೀಚಿನ ಸಂಗ್ರಹಗಳನ್ನು ಶಾಪಿಂಗ್ ಮಾಡಲು ಮತ್ತು ನಮ್ಮ ವಿಶೇಷ ಕೊಡುಗೆಗಳ ಲಾಭವನ್ನು ಒದಗಿಸಲು ಈ ಪ್ರದರ್ಶನಕ್ಕೆ ಪ್ರತಿಯೊಬ್ಬರನ್ನು ಸ್ವಾಗತಿಸಲು ಮತ್ತು ಅನನ್ಯ ಮತ್ತು ಸ್ಮರಣೀಯ ಶಾಪಿಂಗ್ ಅನುಭವ ಒದಗಿಸುವುದರ ಜೊತೆ ಟಿಡಿಎಫ್, ಈ ಸೀಸನ್ ಬೇಡಿಕೆಯ ವಿನ್ಯಾಸ ಗಳ ಆಭರಣಗಳನ್ನು ಒಳಗೊಂಡಿದೆ.
ಮಾ,18 ಮತ್ತು 19ರಂದು ಪೂರ್ವಾಹ್ನ 11ರಿಂದ ಸಂಜೆ 7:30ರವರೆಗೆ ಆಭರಣ ಪ್ರದರ್ಶನ ಗ್ರಾಹಕರಿಗೆ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.











.jpeg)





