ಮನ್ ಕಿ ಬಾತ್ 100ನೇ ಎಪಿಸೋಡ್ ಪ್ರಯುಕ್ತ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬ್ಯಾನರ್ ಅಳವಡಿಸಲು ಸಚಿವಾಲಯ ಚಿಂತನೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಾನುಲಿ ಕಾರ್ಯಕ್ರಮ ʼಮನ್ ಕಿ ಬಾತ್ʼ ಇದರ 100 ನೇ ಸಂಚಿಕೆಯ ಹಿನ್ನೆಲೆಯಲ್ಲಿ ಈ ಕುರಿತು ವ್ಯಾಪಕ ಪ್ರಚಾರಕ್ಕೆ ಮುಂದಾಗಲು ಶಿಕ್ಷಣ ಸಚಿವಾಲಯ ಯೋಚಿಸುತ್ತಿದೆ. ದೇಶಾದ್ಯಂತದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಮನ್ ಕಿ ಬಾತ್ ಬ್ಯಾನರ್‌ಗಳನ್ನು ಅಳವಡಿಸುವ ಬಗ್ಗೆ ಚಿಂತಿಸಲಾಗಿದೆ.
ʻʻಮನ್ ಕಿ ಬಾತ್ ಇದರ 100 ನೇ ಸಂಚಿಕೆಯ ಹಿನ್ನೆಲೆಯಲ್ಲಿ ದೇಶಾದ್ಯಂತದ ಎಲ್ಲಾ ನಾಗರಿಕರಿಂದ ಸಲಹೆಗಳು ಮತ್ತು ಪರಿಕಲ್ಪನೆಗಳನ್ನು ಆಹ್ವಾನಿಸಲು ಪ್ರಸ್ತಾಪಿಸಲಾಗಿದೆ ಮತ್ತು ಈ ಮೂಲಕ ಈ ಕಾರ್ಯಕ್ರಮ ಹೆಚ್ಚು ಜನರನ್ನು ತಲುಪಿ ಅದರ ಪ್ರಭಾವವು ಅಚ್ಚಳಿಯದೆ ಉಳಿಯುವಂತೆ ಮಾಡಲು ಉದ್ದೇಶಿಸಲಾಗಿದೆ," ಎಂದು ಕಳೆದ ವಾರ ಸಚಿವಾಲಯದ ಅಧಿಕೃತ ಸೂಚನೆಯೊಂದು ಹೇಳಿದೆ.
"ಎಲ್ಲಾ ವಿದ್ಯಾರ್ಥಿಗಳೂ MyGov ಪೋರ್ಟಲ್ ಮೂಲಕ ತಮ್ಮ ಸಲಹೆಗಳನ್ನು 30 ನಿಮಿಷಗಳ ರೆಕಾರ್ಡಿಂಗ್ ಮೂಲಕ ಸಲ್ಲಿಸಲು ಅಥವಾ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಚಿವಾಲಯದ ಸೂಚನೆಯಂತೆ ಸಲ್ಲಿಸಬಹುದು," ಎಂದು ಸೂಚನೆಯಲ್ಲಿ ಹೇಳಲಾಗಿದೆ.





