ಮುಂಡ್ಕೂರು: ಬಿಲ್ಲವ ಯುವ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ

ಕಾರ್ಕಳ, ಮಾ.18: ಬಿಲ್ಲವ ಯುವ ವೇದಿಕೆ ಮುಂಡ್ಕೂರು-ಮುಲ್ಲಡ್ಕ-ಇನ್ನಾ ಇದರ 2023-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಂಡ್ಕೂರು ಸಭಾಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಸಚ್ಚೇರಿಪೇಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ವಿಶ್ವನಾಥ ಪೂಜಾರಿ ದಡ್ಡು, ಕೋಶಾಧಿಕಾರಿಯಾಗಿ ಸುಕೇಶ್ ಪೂಜಾರಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸುರೇಶ್ ಪೂಜಾರಿ, ಸಂಚಾಲಕರಾಗಿ ಉದಯ ಪೂಜಾರಿ, ಉಪಾಧ್ಯಕ್ಷರಾಗಿ ಲತೀಶ್ ಪೂಜಾರಿ, ವಿನಯ್ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಮಂಜುನಾಥ, ಕ್ರೀಡಾ ಕಾರ್ಯದರ್ಶಿಯಾಗಿ ಸುಧೀರ್, ಸೃಜನ್, ಸಂಘಟನಾ ಕಾರ್ಯದರ್ಶಿಯಾಗಿ ನಿಶಾನ್ ತೋಟಮನೆ, ಕಾನೂನು ಸಲಹೆಗಾರರಾಗಿ ಗಿರೀಶ್ ಎಸ್.ಪಿ. ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ವಿಶ್ವನಾಥ ಪೂಜಾರಿ, ಪ್ರಕಾಶ್ ಪೂಜಾರಿ, ಪುರುಷೋತ್ತಮ ಪೂಜಾರಿ ಜೋಗಿನಾಡು, ಕೃಷ್ಣ ಪೂಜಾರಿ ಬಂಟ್ರೊಟ್ಟು, ಸಂಜೀವ ಪೂಜಾರಿ, ಕೃಷ್ಣ ಸಾಲ್ಯಾನ್ ಸಂಕಲಕರಿಯ, ಗುರುನಾಥ ಪೂಜಾರಿ, ಪ್ರಶಾಂತ್ ಪೂಜಾರಿ ದಡ್ಡು, ಸುದರ್ಶನ್ ಪೂಜಾರಿ, ವೆಂಕಟೇಶ್ ಪೂಜಾರಿ, ಸುರೇಶ್ ಪೂಜಾರಿ ಗಾಂದಡ್ಪು, ರಮೇಶ್ ಪೂಜಾರಿ ದಡ್ಡು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯಲ್ಲಿ ರೋಹಿತ್ ದಡ್ಡು, ಹರೀಶ್ ಪೂಜಾರಿ ಪಂಚನ್ಯಾಕಾರ್, ಮುಕೇಶ್ ಗರೋಡಿ, ಧನಂಜಯ ಬಂಟ್ರೊಟ್ಟು, ವಿಶ್ವನಾಥ ಪಂಚನ್ಯಾಕಾರ್, ರಜತ್ ಮುಲ್ಲಡ್ಕ, ಸಚಿನ್ ದಡ್ಡು, ವಿಜೇತ್ ಕಲ್ಲಿಮಾರ್, ಕಿಶನ್ ಗರೋಡಿ, ಸಾಗರ್ ಪೂಜಾರಿ ದಡ್ಡು, ಆದಿತ್ಯ ಅರಾದಲ್, ತೇಜಸ್ ದಡ್ಡು, ಯಶವಂತ್ ಪಾದೆಬೆಟ್ಟು, ಅಂಶುಲ್ ಗರೋಡಿ, ರಾಘ ಪೂಜಾರಿ ಜಾರಿಗೆಕಟ್ಟೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.