ಮಾ.19: ಕೇಂದ್ರ ಸಚಿವ ಪರಶೋತ್ತಮ ರೂಪಾಲ ದ.ಕ.ಜಿಲ್ಲೆ ಪ್ರವಾಸ

ಮಂಗಳೂರು: ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಪರಶೋತ್ತಮ ರೂಪಾಲ ಅವರು ಮಾ.19ರ ರವಿವಾರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಮಾ.19ರ ಮಧ್ಯಾಹ್ನ 3.30ಕ್ಕೆ ಮಂಗಳೂರಿಗೆ ಆಗಮಿಸುವ ಅವರು, ನಗರದ ಡಾ. ಟಿ.ಎಂ.ಎ. ಪೈ ಕನ್ವೆಷನ್ ಸೆಂಟರ‌್ನಲ್ಲಿ ಸಾಗರ ಪರಿಕ್ರಮ-2023 (ಹಂತ-4) ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ 4.30ಕ್ಕೆ ಸುದ್ದಿಗೋಷ್ಠಿ ನಡೆಸಿ ಸಂಜೆ 5.35ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಪ್ರಯಾಣಿಸುವರು ಎಂದು ಸಚಿವರ ಕಚೇರಿ ಪ್ರಕಟನೆ ತಿಳಿಸಿದೆ.
Next Story