Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ತಿಳಿ ಹಾಸ್ಯದ ಬಣ್ಣ ಹಚ್ಚಿಕೊಂಡ...

ತಿಳಿ ಹಾಸ್ಯದ ಬಣ್ಣ ಹಚ್ಚಿಕೊಂಡ ‘ಪ್ರಸಂಗಗಳು’

ಕಾರುಣ್ಯಾಕಾರುಣ್ಯಾ19 March 2023 12:05 AM IST
share
ತಿಳಿ ಹಾಸ್ಯದ ಬಣ್ಣ ಹಚ್ಚಿಕೊಂಡ ‘ಪ್ರಸಂಗಗಳು’

 ಕನ್ನಡ ಸಾಹಿತ್ಯ ಲೋಕದಲ್ಲಿ ಕತೆ, ಕವಿತೆ, ಲೇಖನಗಳ ಮೂಲಕ ಚರ್ಚೆಯಲ್ಲಿರುವವರು ಮುಂಬೈಯ ಗೋಪಾಲ್ ತ್ರಾಸಿ. ಮುಂಬೈ ಕನ್ನಡ ಲೋಕದ ‘ನೆಲದ ನಕ್ಷತ್ರ’ವೆಂದು ಗುರುತಿಸಲ್ಪಡುತ್ತಿರುವ ಗೋಪಾಲ್ ಅವರ ಹತ್ತನೇ ಕೃತಿ ‘ಒಟ್ರಾಸಿ ಪ್ರಸಂಗಗಳು’. ಹರಟೆಗಳೆಂದು ಕರೆಯಬಹುದಾದ ಸುಮಾರು 14 ‘ಅಧಿಕ ಪ್ರಸಂಗ’ಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಮುಂಬೈಯ ಚಲಿಸುವ ಲೋಕಲ್ ಟ್ರೇನ್‌ನ ಕಿಟಕಿಯಲ್ಲಿ ನೋಡಿದ ದೃಶ್ಯಗಳಿಗೆ ಮರು ರೂಪಕೊಟ್ಟು ಬಣ್ಣ ಬಳಿಯುವ ಕಲಾವಿದನಂತೆ, ಗೋಪಾಲ್ ತನ್ನ ದೈನಂದಿನ ಬದುಕಿನಲ್ಲಿ ಎದುರಾದ ಹಲವು ಸಣ್ಣ ಪುಟ್ಟ ಘಟನೆಗಳನ್ನು ತಿಳಿ ಹಾಸ್ಯದ ಬಣ್ಣ ಹಚ್ಚಿ ಮರು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ದಿನನಿತ್ಯ ನಾವು ಚರ್ಚಿಸುವ ರಾಜಕೀಯ, ಸಾಮಾಜಿಕ ವಿಷಯಗಳನ್ನು ವಿಡಂಬನೆಯ ಮೂಲಕ ತೀಡುವ ಪ್ರಯತ್ನ ನಡೆಸಿದ್ದಾರೆ. ಆದುದರಿಂದಲೇ, ಇಲ್ಲಿರುವ ಬರಹಗಳನ್ನು ಹರಟೆಯೆಂದು ತೀರಾ ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಹಾಗೆಯೇ ಲಲಿತ ಪ್ರಬಂಧದ ಭಾರವನ್ನೂ ಬೆನ್ನಲ್ಲಿ ಹೊತ್ತುಕೊಂಡಿಲ್ಲ. ಮುಂಬೈಯ ಬದುಕಿನ ನಾನಾ ದರ್ಶನಗಳನ್ನು ತಿಳಿಯಾಗಿ, ಹಸನ್ಮುಖಿಯಾಗಿ ಅವರು ತೆರೆದಿಟ್ಟಿದ್ದಾರೆ.

‘ಮೇನಕೆಯಲ್ಲ...’ ಬರಹ ಸೀರೆಗೆ ಮೋಸ ಹೋದ ‘ವಿಶ್ವಾ’ಮಿತ್ರರ ಸಂಕಟಗಳನ್ನು ತಮಾಷೆಗೈದರೆ, ‘ಹೀಗೊಂದು ಕೊರೆತ’ದಲ್ಲಿ, ಮುಂಬೈ ಶಹರದಲ್ಲಿ ಕೊರೆಯುವುದನ್ನೇ ಹವ್ಯಾಸ ಮಾಡಿಕೊಂಡವರ ಕೈಗೆ ಸಿಲುಕಿಕೊಂಡಾಗ ಎದುರಾಗುವ ಧರ್ಮ ಸಂಕಟಗಳನ್ನು ತಮಾಷೆಯಾಗಿ ನಿರೂಪಿಸುತ್ತಾರೆ. ಕೆಲವೊಮ್ಮೆ ಈ ಕೊರೆತದ ಆಳದಲ್ಲಿ ಮಾನವೀಯ ಸಂಬಂಧದ ಒಸರು ಅಡಗಿಕೊಂಡಿರುವ ಬಗೆಯನ್ನು ಅವರು ಈ ಸಂದರ್ಭದಲ್ಲಿ ಮರೆಯುವುದಿಲ್ಲ. ‘ಲೈಟ್ ಕಾಫಿ’ಯ ಮೂಲಕ ಕಾಫಿಯ ಬಗೆ ಬಗೆಯನ್ನು ವಿವರಿಸುತ್ತಾ ಅದಕ್ಕೆ ತಳಕು ಹಾಕಿಕೊಂಡಿರುವ ಮನುಷ್ಯ ಗುಣಗಳನ್ನೂ ತಮಾಷೆಯಾಗಿ ನಿರೂಪಿಸುತ್ತಾರೆ. ‘ಅಭಾಕುಸಂ’ ಅಖಿಲ ಭಾರತೀಯ ಕುಡುಕರ ಸಂಸಾರ, ಬದುಕಿನ ತಾಪತ್ರಯಗಳನ್ನು ತೆರೆದಿಟ್ಟರೆ, ‘ಇದೊಂದು ಕೆಟ್ಟ ಚಟಾರಿ...’ ಬರಹದಲ್ಲಿ ಬರಹಗಾರನ ಸಂಕಟಗಳನ್ನು ತಮಾಷೆಯಾಗಿ ತೆರೆದಿಡಲಾಗಿದೆ. ಬಜೆಟ್‌ನಂತಹ ಗಂಭೀರ ವಿಷಯವನ್ನೂ ತನ್ನ ತಮಾಷೆಯ ಇಕ್ಕಳಕ್ಕೆ ಹಾಕಿ ಬಗ್ಗಿಸಿರುವುದು ಲೇಖಕರ ಹೆಚ್ಚುಗಾರಿಕೆ. ‘‘ಇಲ್ಲಿನ ಲೇಖನಗಳನ್ನು ಓದುವಾಗ ಲೇಖಕ ತ್ರಾಸಿ ಅವರ ಮೃದು ಹಾಸ್ಯ ಗುಣ, ಔಚಿತ್ಯ ಪ್ರಜ್ಞೆ, ಭಾಷಾ ಮಾಧುರ್ಯದ ಲಯ, ಪ್ರಸಂಗ ಸನ್ನಿವೇಶಗಳನ್ನು ವಿವರ ವಿವರವಾಗಿ ಕಡೆದು ಬಿಡಿಸುವ ಕಲಾವಂತಿಕೆ, ಒಂದು ಪ್ರಬುದ್ಧ ದೃಷ್ಟಿಕೋನ ಎಲ್ಲವೂ ಮನಸ್ಸಿಗೆ ತಾಕುತ್ತವೆ....’’ ಎಂದು ಮುನ್ನುಡಿಯಲ್ಲಿ ಹಿರಿಯ ಲೇಖಕ ಪ್ರೊ. ಎಂ. ಕೃಷ್ಣೇಗೌಡರು ಬರೆಯುತ್ತಾರೆ.

ಮುಂಬೈ ಚುಕ್ಕಿ ಸಂಕುಲ ಪ್ರಕಾಶನ ಈ ಕೃತಿಯನ್ನು ಹೊರ ತಂದಿದೆ. ಒಟ್ಟು ಪುಟಗಳು 102. ಕೃತಿಯ ಮುಖಬೆಲೆ 125 ರೂ. ಆಸಕ್ತರು 99302 62088 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X