Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಚರಕದಿಂದ ಅಂಡರ್‌ವರ್ಲ್ಡ್ ತನಕ

ಚರಕದಿಂದ ಅಂಡರ್‌ವರ್ಲ್ಡ್ ತನಕ

ರಶ್ಮಿ ಎಸ್.ರಶ್ಮಿ ಎಸ್.19 March 2023 9:38 AM IST
share
ಚರಕದಿಂದ ಅಂಡರ್‌ವರ್ಲ್ಡ್ ತನಕ

ಅಂಡರ್‌ವರ್ಲ್ಡ್ ಅನ್ನುವುದು, ಸಿನೆಮಾ ಮಂದಿಗೆ ಆಯಸ್ಕಾಂತೀಯ ವಸ್ತು. ಕಾಲದಿಂದ ಕಾಲಕ್ಕೆ ಬೇರೆ ಬೇರೆ ಶೇಡ್‌ಗಳಲ್ಲಿ ಭೂಗತ ಲೋಕದ ಕತೆಗಳು ತೆರೆಯ ಮೇಲೆ ಬಿಚ್ಚಿಕೊಳ್ಳುತ್ತಲೇ ಇರುತ್ತವೆ. ಹಾಗೆಂದು ಎಲ್ಲ ಅಂಡರ್‌ವರ್ಲ್ಡ್ ಸಿನೆಮಾಗಳು ಕ್ಲಿಕ್ ಆಗಿವೆ ಎಂದಲ್ಲ. ಕೆಲವೊಮ್ಮೆ ಪ್ರೇಕ್ಷಕರು ಅಂಡರ್‌ವರ್ಲ್ಡ್ ಚಿತ್ರಕ್ಕೆ ಸೆಲ್ಯೂಟ್ ಮಾಡಿದರೆ, ಇನ್ನು ಕೆಲವೊಮ್ಮೆ ಇಂಥ ವಿಷಯಗಳನ್ನು ಸಿನೆಮಾ ಮಾಡಿ ಏನು ಸಂದೇಶ ಕೊಡಲು ಹೊರಟಿದ್ದಾರೋ ಎಂದು ಗೊಣಗಾಟದ ಜೊತೆ ಥಿಯೇಟರಿನಿಂದ ಹೊರಬಂದ ಸಾಕಷ್ಟು ಉದಾಹರಣೆ ಗಳು ನಮ್ಮ ಮುಂದಿವೆ. ಆದರೆ ಭೂಗತ ಲೋಕದೊಳಗೆ ಇಣುಕಿ ನೋಡುವ ಅಭ್ಯಾಸ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಅದು ಮುಂದುವರಿಯುತ್ತಲೇ ಇದೆ.

ಸಿನೆಮಾ ಅನ್ನುವುದು ನಿರ್ದೇಶಕನ ಕಲ್ಪನೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಂಡರ್‌ವರ್ಲ್ಡ್ ಕಥೆಗಳನ್ನು ತೆರೆಯ ಮೇಲೆ ತಂದಿದ್ದಾರೆ. ಕತ್ತಲ ಜಗತ್ತಿನ ಜೊತೆ ಕಣ್ಣಾಮುಚ್ಚಾಲೆ ಆಡುವುದು ಅಂದರೆ ಸಿನೆಮಾ ಮಂದಿಗೆ ಒಂಥರಾ ಕುತೂಹಲ. ಅಂಥ ಸಾಹಸಕ್ಕೆ ಈಗ ಕೈ ಹಾಕಿದ್ದಾರೆ ನಿರ್ದೇಶಕ ಆರ್. ಚಂದ್ರು. ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ಮೂಡಿಬಂದ ‘ಕಬ್ಜ’ ಸಿನೆಮಾ, ಚಂದ್ರು ಅವರ ಕಲ್ಪನೆಯ ಕೂಸು. ಆ ಕಲ್ಪನೆಗೆ ಸಿನೆಮಾ ರೂಪ ಕೊಟ್ಟು ತೆರೆಯ ಮೇಲೆ ತರುವ ಪ್ರಯತ್ನವನ್ನು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಪ್ಯಾನ್ ಇಂಡಿಯಾ ಕಲ್ಪನೆ ಆದ್ದರಿಂದ ಈ ಸಿನೆಮಾದ ಗತ್ತೇ ಬದಲಾಗಿ ಹೋಗಿದೆ. ಕಬ್ಜ ಪೂರ್ತಿ ರಕ್ತಸಿಕ್ತ ಅಧ್ಯಾಯವಾಗಿ ಹೊರಬಂದಿದೆ.

ಭೂಗತ ಲೋಕದ ಪ್ರತೀ ಚರಿತ್ರೆಯ ಹಿಂದೆಯೂ ಒಂದು ಕಥೆಯಿರುತ್ತದೆ. ಅದು ನೋವಿನ ಕಥೆಯಾಗಿರಬಹುದು, ಇಲ್ಲ ಸ್ವಾಭಿಮಾನದ ಕಥೆಯಾಗಿರಬಹುದು, ಇಲ್ಲ ಅಧಿಕಾರದ ಕಥೆಯಾಗಿರಬಹುದು. ಆದರೆ ಇಲ್ಲಿ ಕಬ್ಜ ಸಿನೆಮಾದ ಚರಿತ್ರೆ ಸೃಷ್ಟಿಯಾಗುವುದೇ ದೇಶಪ್ರೇಮಿಯ ಕಿಚ್ಚಿನಿಂದ. ತನ್ನ ಕುಟುಂಬಕ್ಕಾದ ಅನ್ಯಾಯದಿಂದ. ದೇಶಭಕ್ತರ ಕುಟುಂಬದಲ್ಲಿ ಹುಟ್ಟಿದ ಸಾಧು ನಾಯಕ, ಹೇಗೆ ಭೂಗತ ಲೋಕವನ್ನು ಆಳುತ್ತಾನೆ ಎನ್ನುವುದೇ ಕಬ್ಜ ಸಿನೆಮಾದ ಕತೆ.

ಸಿನೆಮಾದ ಕಥೆ ಶುರುವಾಗುವುದೇ ಕಿಚ್ಚ ಸುದೀಪ್ ಅಂದರೆ ಪೊಲೀಸ್ ಅಧಿಕಾರಿ ಭಾರ್ಗವ್ ಭಕ್ಷಿ ಪಾತ್ರದ ಎಂಟ್ರಿಯಿಂದ. ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ಸುದೀಪ್ ಭರ್ಜರಿ ಎಂಟ್ರಿ ಕೊಡುತ್ತಾರೆ. ರೌಡಿಶೀಟರ್‌ಗಳ ಬೆವರಿಳಿಸಿ, ‘‘ನಿಮ್ದ್ಯಾವುದೋ ರೌಡಿಸಂ, ನೀವೆಲ್ಲಾ ರೌಡಿಸಂ ಅನ್ನೋದನ್ನ ಪದವಿ ಅದ್ಕೊಂಡ್ರಾ? ಭೂಗತ ಲೋಕದ ದೊರೆಯನ್ನೇ ಮಟ್ಟ ಹಾಕಿದವನಿಗೆ ನೀವೆಲ್ಲಾ ಒಂದ್ ಲೆಕ್ಕನಾ?’’ ಎಂದು ನಾಯಕನ ಕಥೆ ಹೇಳುವುದಕ್ಕೆ ಶುರುಮಾಡುತ್ತಾರೆ ಭಾರ್ಗವ್ ಭಕ್ಷಿ. ಇಡೀ ಸಿನೆಮಾ ಇವರ ನಿರೂಪಣೆಯಲ್ಲೇ ಮುಂದುವರಿಯುತ್ತದೆ. ಸಿನೆಮಾ ಆರಂಭದಲ್ಲಿ ಬಂದು ಕಥೆ ಹೇಳುವ ಅಧಿಕಾರಿ ಮತ್ತೆ ಸಿನೆಮಾದ ಕ್ಲೈಮ್ಯಾಕ್ಸ್‌ನಲ್ಲಿ ಪ್ರತ್ಯಕ್ಷ ಆಗುತ್ತಾರೆ.

ನಾಯಕ ಅರ್ಕೇಶ್ವರ(ಉಪೇಂದ್ರ)ನ ಕಥೆ ಶುರುವಾಗುವುದು ಸ್ವಾತಂತ್ರ್ಯ ಪೂರ್ವದಲ್ಲಿ. ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ಹುಟ್ಟಿ ಬೆಳೆದ ಅರ್ಕೇಶ್ವರ ಪರಿಸ್ಥಿತಿಗೆ ಅನುಗುಣವಾಗಿ ಹೇಗೆ ಬದಲಾಗುತ್ತಾನೆ ಅನ್ನುವುದನ್ನು ರಕ್ತಸಿಕ್ತ ಅಧ್ಯಾಯದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಆರ್. ಚಂದ್ರು. ಉತ್ತರ ಭಾರತದ ಸಂಗ್ರಾಮ್‌ಪುರದಲ್ಲಿದ್ದ ನಾಯಕ ಅರ್ಕೇಶ್ವರನ ಕುಟುಂಬ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಲೇ ಇರುತ್ತದೆ. ಆ ಹೋರಾಟದಲ್ಲಿ ನಾಯಕ, ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ. ಇಬ್ಬರು ಮಕ್ಕಳ ಜೊತೆ ಅರ್ಕೇಶ್ವರನ ತಾಯಿ ದಕ್ಷಿಣ ಭಾರತದ ಅಮರಾಪುರಕ್ಕೆ ಬಂದು ನೆಲೆಸುತ್ತಾರೆ. ಚರಕ ಹಿಡಿದು ಬಟ್ಟೆ ನೇಯ್ದು, ಬಾವುಟಗಳನ್ನು ಮಾರಿ ಜೀವನ ಸಾಗಿಸುತ್ತಿರುತ್ತಾರೆ. ನಾಯಕ ಅರ್ಕೇಶ್ವರನ ಅಣ್ಣ ಸಂಕೇಶ್ವರ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡರೆ, ನಾಯಕ ಅರ್ಕೇಶ್ವರ ಪೈಲೆಟ್ ಟ್ರೈನಿಂಗ್‌ಗೆ ತೆರಳುತ್ತಾನೆ. ಅಲ್ಲಿಂದ ವಾಪಸ್ ಬಂದಾಗಲೇ ಶುರುವಾಗುವುದು ಕಬ್ಜದ ಅಸಲಿ ಕಥೆ.

ಸ್ವಾತಂತ್ರಾನಂತರ ಅರಸೊತ್ತಿಗೆ ಕಳೆದುಕೊಂಡ ರಾಜಮನೆತನಗಳು ಅಧಿಕಾರ ಪ್ರತಿಷ್ಠೆಗಾಗಿ ಒದ್ದಾಡುತ್ತಿರುತ್ತವೆ. ಅಧಿಕಾರಕ್ಕಾಗಿ ನಾನಾ ಸಂಚುಗಳನ್ನು ರೂಪಿಸುತ್ತಲೂ ಇರುತ್ತವೆ. ರಾಜಮನೆತನ, ರಾಜಕಾರಣಿಗಳು ಮತ್ತು ಭೂಗತ ಲೋಕದ ನಡುವಿನ ಸಂಘರ್ಷದಲ್ಲಿ ಹೇಗೆ ದೇಶಪ್ರೇಮಿ ಕುಟುಂಬದ ಹುಡುಗ ಭೂಗತ ಲೋಕದ ದೊರೆಯಾಗಿ ಬೆಳೆಯುತ್ತಾನೆ ಅನ್ನುವುದನ್ನು ಸಿನೆಮಾ ನೋಡಿಯೇ ತಿಳಿಯಬೇಕು.

ಫಸ್ಟ್ ಹಾಫ್ ಮುಗಿಯುವುದರೊಳಗೆ ಅರ್ಕೇಶ್ವರ, ಭೂಗತ ಲೋಕದ ಅರ್ಕನಾಗಿ ಬದಲಾಗುತ್ತಾನೆ. ಅಸಲಿ ಕಬ್ಜ ಶುರುವಾಗುವುದೇ ಮಧ್ಯಂತರದಿಂದ. ಅಲ್ಲಿಂದ ಅರ್ಕೇಶ್ವರನ ನಡೆ ವೈಲೆಂಟ್ ಆಗುತ್ತದೆ. ಈ ವೈಲೆಂಟ್ ಕಥೆಯಲ್ಲೊಂದು ಪ್ರೇಮಕಥೆಯೂ ಇದೆ. ನಾಯಕಿಯಾಗಿ ಶ್ರಿಯಾ ಸರನ್ ರೆಟ್ರೋ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಕಿಚ್ಚ ಸುದೀಪ್ ಸಖತ್ತಾಗಿಯೇ ಮಿಂಚಿದ್ದಾರೆ. ಸಿನೆಮಾದ ಉದ್ದಕ್ಕೂ ಆಗಾಗ ಕಿಚ್ಚ ಸುದೀಪ್ ನಿರೂಪಣೆ ಕಿಕ್ ಕೊಡುತ್ತದೆ. ಇದೇ ಮೊದಲ ಬಾರಿಗೆ ಇಂಥ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಪೇಂದ್ರ ಅಭಿನಯ ಅಭಿಮಾನಿಗಳಿಗೆ ಕಿಕ್ ಕೊಟ್ಟರೂ, ಅಲ್ಲಲ್ಲಿ ಉಪ್ಪಿಈ ಪಾತ್ರಕ್ಕೆ ಸರಿಹೊಂದುತ್ತಾರೆಯೇ? ಎಂಬ ಅನುಮಾನವೂ ಕಾಡುತ್ತದೆ.

ನಿರೂಪಣೆಯಲ್ಲಿ ಇನ್ನೂ ಸ್ವಲ್ಪವೇಗ ಇದ್ದಿದ್ದರೆ ಸಿನೆಮಾ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು. ಕೆಲವೊಮ್ಮೆ ಕಥೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗಿ, ಹಾದಿ ತಪ್ಪಿಸುತ್ತದೆ. ಆ್ಯಕ್ಷನ್ ಸೀನ್‌ಗಳಂತೂ ಹೆಚ್ಚೇ ಅನಿಸುತ್ತವೆ. ಈ ಸಿನೆಮಾದ ಪಾತ್ರಗಳನ್ನು ನೋಡಿದಾಗ ಹಳೆಯ ಕೆಲವೊಂದು ಸಿನೆಮಾಗಳ ಪಾತ್ರಗಳು ಕಣ್ಮುಂದೆ ಬರುತ್ತವೆ. ಜೊತೆಗೆ ಡೈಲಾಗ್ ಕೂಡ ಎಲ್ಲೋ ಕೇಳಿದ್ದ್ದೇವಲ್ಲಾ ಎನಿಸುತ್ತದೆ. ರವಿ ಬಸ್ರೂರ್ ಸಂಗೀತದಲ್ಲಿ ಹೊಸತನ ಇಲ್ಲದಿದ್ದರೂ, ಎಲ್ಲೂ ಬೋರ್ ಹೊಡೆಸುವುದಿಲ್ಲ. ಈ ಎಲ್ಲವನ್ನೂ ಬದಿಗಿಟ್ಟು ನೋಡಿದರೆ ಸಿನೆಮಾದ ಮೇಕಿಂಗ್ ಅದ್ಭುತವಾಗಿದೆ. ಅದ್ದೂರಿಯಾದ ಸೆಟ್‌ಗಳು, ನೆರಳು ಬೆಳಕಿನಾಟ, ಜೊತೆಗೆ ಎ.ಜೆ. ಶೆಟ್ಟಿ ಸಿನೆಮಾಟೋಗ್ರಫಿ ಗಮನ ಸೆಳೆಯುತ್ತದೆ.

ಇನ್ನುಳಿದಂತೆ ಸುನೀಲ್ ಪುರಾಣಿಕ್, ತಾನ್ಯಾ ಹೋಪ್, ಬಿ. ಸುರೇಶ್, ಅನೂಪ್ ರೇವಣ್ಣ ಜೊತೆಗೆ ನೀನಾಸಂ ಅಶ್ವಥ್ ಪಾತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಸಿನೆಮಾ ಕ್ಲೈಮ್ಯಾಕ್ಸ್‌ನಲ್ಲಿ ಎಂಟ್ರಿ ಕೊಡುವ ಶಿವಣ್ಣನನ್ನು ನೋಡಿ ಪ್ರೇಕ್ಷಕರ ಕಿಕ್ ಜಾಸ್ತಿಯಾಗುತ್ತದೆ. ಹಂಟರ್, ಪಂಟರ್ ಮಧ್ಯೆ ಬರೋ ಫೈರ್ ಆಗಿ ಶಿವರಾಜ್ ಕುಮಾರ್ ಮಾಸ್ ಲುಕ್, ಡೈಲಾಗ್, ಕಬ್ಜ-2 ಸಿನೆಮಾದ ಸುಳುಹು ಬಿಟ್ಟುಕೊಡುತ್ತದೆ.

share
ರಶ್ಮಿ ಎಸ್.
ರಶ್ಮಿ ಎಸ್.
Next Story
X