ಮಂಗಳೂರು: ನಗರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ
ಮಂಗಳೂರು : ನಗರದಲ್ಲಿ ವಿಶೇಷವಾಗಿ ಎಲ್ಲಾ ಜನನಿಬಿಡ ಮತ್ತು ವಾಣಿಜ್ಯ ವಹಿವಾಟು ನಡೆಯುವ ಪ್ರಮುಖ ಸ್ಥಳಗಳಲ್ಲಿ 98 ಸಿಸಿಟಿವಿ ಕ್ಯಾಮರಾಗಳನ್ನು ಅಳವಾಡಿಸಲಾಗಿದೆ.
ಕಾನೂನು ,ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರದ ಎಲ್ಲಾ ಅಂಶಗಳನ್ನು ಈ ಕ್ಯಾಮರಾಗಳು ಸೆರೆ ಹಿಡಿಯಲು ನೆರವಾಗಲಿದೆ. ನಗರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳ ಎಲ್ಲಡೆ ಅಗತ್ಯ. ಈಗ ಅಳವಡಿಸಿರುವ ಕ್ಯಾಮರಾಗಳು ಎಲ್ಲಾ ಸಮಯದಲ್ಲೂ ಸರಿಯಾದ ಕಣ್ಗಾವಲು ಇರಿಸಲು ಸಹಾಯಕವಾಗಲಿದೆ ಎಂದು ಪೊಲೀಸ್ ಆಯಕ್ತರು ತಿಳಿಸಿದ್ದಾರೆ.
Next Story