Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

19 March 2023 6:46 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಓ ಮೆಣಸೇ...

ಪ್ರಜಾಪ್ರಭುತ್ವದಲ್ಲಿ ಹಣ, ಸೀರೆ,ಕುಕ್ಕರ್ ಹಂಚಿದರೆ ರಾಜಕಾರಣದಲ್ಲಿ ಒಳ್ಳೆಯವರು ಆರಿಸಿ ಬರಲು ಸಾಧ್ಯವಿಲ್ಲ -ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ
ಏನನ್ನೂ ಕೊಡದವರು ಬಂದರೆ, ಅವರು ಒಳ್ಳೆಯವರಾಗಿದ್ದರೂ ಜನತೆಗೇನು ಲಾಭ?

ಈ ಚುನಾವಣೆಯಲ್ಲಿ ಮನೆ ಸೇರದೆ ರಾಜ್ಯವ್ಯಾಪಿ ಸುತ್ತಾಡಿ 145 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ಪ್ರಧಾನಿ ಮೋದಿಗೆ ಉಡುಗೊರೆ ನೀಡುವೆ- ಯಡಿಯೂರಪ್ಪ, ಮಾಜಿ ಸಿಎಂ
ಉಳಿದ ನೂರು ಕ್ಷೇತ್ರಗಳನ್ನು ರಾಹುಲ್ ಗಾಂಧಿಗೆ ಉಡುಗೊರೆ ನೀಡುವ ಯೋಚನೆಯೇ?

ಕಾಂಗ್ರೆಸ್‌ನವರು ಮಾನಸಿಕವಾಗಿ ದಿವಾಳಿಯಾಗಿದ್ದಾರೆ- ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಅವರೇನೇ ಇರಲಿ ದೇಶವನ್ನು ದೀವಾಳಿ ಎಬ್ಬಿಸಿಲ್ಲ.

ಒಂದು ಕಾಲದಲ್ಲಿ ಕಾಂಗ್ರೆಸಿಗರು ಯಡಿಯೂರಪ್ಪರನ್ನು ಸೋಲಿಸುವುದಕ್ಕೆ ಮಾತ್ರವಲ್ಲ ಕೊಲ್ಲುವುದಕ್ಕೂ ಪ್ರಯತ್ನಿಸಿದ್ದರು. - ಸಿ.ಟಿ.ರವಿ, ಶಾಸಕ
ಆಗ ನೀವು ಆ ಕಾಂಗ್ರೆಸ್ ಗ್ಯಾಂಗ್‌ನ ಸದಸ್ಯರಾಗಿದ್ದರಿಂದ ಅಷ್ಟು ದೊಡ್ಡ ಮಾಹಿತಿಯನ್ನು ಈಗ ಬಹಿರಂಗಪಡಿಸುತ್ತಿರುವುದೇ?

ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿ, ದೀಪ ಆರುವ ಮುನ್ನ ಜೋರಾಗಿ ಉರಿಯುವ ಹಾಗಿದೆ- ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ನಿಮಗೆ ಕಾಂಗ್ರೆಸ್ ದೀಪವು ಜೋರಾಗಿ ಉರಿಯುವಂತೆ ಕಾಣುತ್ತಿದ್ದರೆ, ಅದು ನಿಮ್ಮ ಹತಾಶೆಯ ಸೂಚನೆ.

ಕವಿತಾ, ಸಿಸೋಡಿಯಾ, ಲಾಲು ಯಾರೇ ಆಗಿರಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ - ಗೌರವ್ ಭಾಟಿಯಾ, ಬಿಜೆಪಿ ವಕ್ತಾರ
ಕಾನೂನಿಗಿಂತ ದೊಡ್ಡವರು ಎಂಬ ಗೌರವವನ್ನು ನೀವು ಮೋದಿ ಪಾಳಯದವರಿಗೆ ಮೀಸಲಿಟ್ಟಿರುವಿರಲ್ಲಾ!

ನನ್ನನ್ನು ಜೈಲಿಗೆ ಹಾಕಿ ತೊಂದರೆ ಕೊಡಬಹುದು ಆದರೆ ನನ್ನ ಆತ್ಮ ಸ್ಥೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ - ಮನೀಶ್ ಸಿಸೋಡಿಯಾ, ದಿಲ್ಲಿ ಮಾಜಿ ಉಪ ಮುಖ್ಯಮಂತ್ರಿ
ನಿಮ್ಮನ್ನು ಜೈಲಿಗೆ ಕಳಿಸಬಯಸುವವರು ಕಳಿಸಿದ್ದಾರೆ. ನಿಮ್ಮ ಆತ್ಮಸ್ಥೈರ್ಯ ಹೇಗಿದ್ದರೆ ಅವರಿಗೇನಂತೆ?

ಪಕ್ಷದ ಸಿದ್ಧಾಂತದ ತಳಹದಿ ಮೇಲೆ ಚುನಾವಣೆಗೆ ಹೋಗುತ್ತೇನೆ ಹೊರತು, ಕೌಟುಂಬಿಕ ವಿಚಾರಗಳನ್ನು ಅನುಸರಿಸುವುದಿಲ್ಲ - ಸತೀಶ್ ಜಾರಕಿ ಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಮತದಾರರು ಮತನೀಡುವುದು ವ್ಯಕ್ತಿಗಳಿಗೆ ಹೊರತು ಸಿದ್ಧಾಂತಗಳಿಗಲ್ಲ.

ಕಾಂಗ್ರೆಸ್‌ಗೆ ತಾಕತ್ತು, ದಮ್ಮು ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ - ಶ್ರೀರಾಮುಲು, ಸಚಿವ
ಮುಂದಿನ ಪ್ರತಿಪಕ್ಷ ನಾಯಕ ಯಾರೆಂದು ನೀವು ಘೋಷಿಸಿದರೆ ಉಳಿದ ವಿವರಗಳನ್ನು ಅವರು ಘೋಷಿಸಬಹುದು.

ಚಾಣಕ್ಯನ ಸೂತ್ರದ ಪ್ರಕಾರ ವಿದೇಶಿ ಮಹಿಳೆಗೆ ಜನಿಸಿದ ಮಗ ದೇಶ ಪ್ರೇಮಿಯಾಗಲಾರ ಎನ್ನುವುದನ್ನು ರಾಹುಲ್ ಗಾಂಧಿ ಸಾಬೀತು ಮಾಡಿದ್ದಾರೆ- ಪ್ರಜ್ಞಾ ಸಿಂಗ್ ಠಾಕೂರ್, ಸಂಸದೆ
ತಾವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದ ಬಗ್ಗೆ ಚಾಣಕ್ಯ ಸೂತ್ರದಲ್ಲೇನಿದೆ?

ರಾಜಕೀಯ ಎಂದರೆ ನಾವು ಏನು ಅಂದುಕೊಳ್ಳುತ್ತೇವೋ ಅದು ಅಲ್ಲವೇ ಅಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹೌದು. ರಾಜಕೀಯವೆಂದರೆ ಕೇವಲ ಆಡಳಿತ ಪಕ್ಷವಲ್ಲ. ಪ್ರತಿಪಕ್ಷ ಎಂಬೊಂದು ಪಕ್ಷವೂ ಅಲ್ಲಿರುತ್ತದೆ. ಹಲವಾರು ವರ್ಷ ಅಲ್ಲೂ ಇರಬೇಕಾಗುತ್ತದೆ.

ಮುಂದಿನ 25ವರ್ಷ ಯಡಿಯೂರಪ್ಪರ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತೇನೆ- ವಿ.ಸೋಮಣ್ಣ, ಸಚಿವ
ಆನಂತರದ ನೂರಿನ್ನೂರು ವರ್ಷಗಳ ಬಗ್ಗೆಯೂ ಈಗಲೇ ತಿಳಿಸಿಬಿಡಿ.

ರಾಷ್ಟ್ರೀಯವಾದಿ ಮುಸ್ಲಿಮರು ನಮ್ಮ ಜೊತೆಗಿದ್ದಾರೆ - ಕೆ ಎಸ್.ಈಶ್ವರಪ್ಪ, ಶಾಸಕ
ಅದು ನಿಮಗೆ ರಾಷ್ಟ್ರೀಯವಾದವನ್ನು ಕಲಿಸುವ ಪ್ರಯತ್ನದ ಭಾಗವಾಗಿರಬಹುದು.

ಎರಡು ಟಿಕೆಟ್ ಕೇಳುವುದಿಲ್ಲ. ನನಗೆ ಅಥವಾ ನನ್ನ ಮಗನಿಗೆ ಒಂದೇ ಟಿಕೆಟ್ ಎಂದು ನಮ್ಮ ಮನೆಯಲ್ಲಿ ತೀರ್ಮಾನ ಮಾಡಿದ್ದೇವೆ- ಕೆ.ಎಸ್ . ಈಶ್ವರಪ್ಪ, ಶಾಸಕ
ಒಂದೇ ಟಿಕೆಟ್ ಇದ್ದರೆ ಥಿಯೇಟರ್ ನಲ್ಲಿ ಇಬ್ಬರನ್ನು ಒಳಗೆ ಬಿಡುತ್ತಾರೆಯೇ?

ಭಾರತಕ್ಕೆ ಸುಶಿಕ್ಷಿತ ಪ್ರಧಾನಿಯ ಅಗತ್ಯವಿದೆ- ಅರವಿಂದ ಕ್ರೇಜಿವಾಲ್, ದಿಲ್ಲಿ ಸಿಎಂ
ಅತ್ಯುನ್ನತ ಶಿಕ್ಷಣವಿದ್ದವರು ಪ್ರಧಾನಿಯಾಗಿದ್ದಾಗ, ನಿಮ್ಮ ಸಾಮರ್ಥ್ಯವೆಲ್ಲಾ ಅವರನ್ನು ಇಳಿಸುವುಕ್ಕೆ ಮೀಸಲಾಗಿತ್ತಲ್ಲಾ?

ಸಚಿವರಾದ ಅಶೋಕ್ ಮತ್ತು ಅಶ್ವತ್ಥನಾರಾಯಣ ಸಂಶೋಧನೆ ಮಾಡಿಯೇ ಮರಿಗೌಡ ಟಿಪ್ಪು ಸುಲ್ತಾನನನ್ನು ಕೊಂದಿದ್ದು ಎಂದಿದ್ದಾರೆ- ಮುನಿರತ್ನ, ಸಚಿವ
ಆರೆಸ್ಸೆಸ್ ನ ಹಳೆಯ ಕಪಾಟುಗಳಲ್ಲಿ ನಡೆಸುವ ಹುಡುಕಾಟಕ್ಕೆ ಶೋಧನೆ ಅನ್ನುವುದಿಲ್ಲ.

ರೌಡಿ ಶೀಟರ್ ಫೈಟರ್ ರವಿ ಯಾರೆಂದು ಪ್ರಧಾನಿಗೆ ಗೊತ್ತಿರಲಿಲ್ಲ. ಸ್ಥಳೀಯರ ಕಣ್ತಪ್ಪಿನಿಂದ ಸ್ವಾಗತ ಪಟ್ಟ ಯಲ್ಲಿ ಲೋಪವಾಗಿದೆ - ಶೋಭಾ ಕರಂದ್ಲಾಜೆ , ಕೇಂದ್ರ ಸಚಿವೆ
ಆತ ಯಾರೆಂದು ಅವರಿಗೆ ಗೊತ್ತಾಗಿ ಬಿಟ್ಟರೆ ಆತನಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನುವುದೇ ಒಂದು ಡೋಂಗಿ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಅಸಹಿಷ್ಣುತೆ ಇದೆ ಎಂಬ ಹೇಳಿಕೆಯ ಬಗ್ಗೆ ನಿಮ್ಮ ಆಕ್ರೋಶ ಎಲ್ಲವನ್ನೂ ಬಹಿರಂಗಪಡಿಸುತ್ತದೆ.

ಮಾತೃ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ಮೊದಲು ಜಾರಿಗೆ ತಂದದ್ದು ಕರ್ನಾಟಕದಲ್ಲಿ - ಥಾವರ್‌ಚಂದ್ ಗ್ಲೆಹೋಟ್, ರಾಜ್ಯಪಾಲ
ಬಿಜೆಪಿಯ ಎಲ್ಲ ಕಸಗಳಿಗೂ ಮೊದಲ ತೊಟ್ಟಿ ಕರ್ನಾಟಕ ಎನ್ನುವುದು ಬಿಜೆಪಿ ನಾಯಕರಿಗೆ ಮನವರಿಕೆ ಆಗಿದೆ.

ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇದ್ದರೆ ಅಪರಾಧಗಳು ಕಡಿಮೆಯಾಗುತ್ತವೆ- ಎಸ್.ಅಂಗಾರ, ಸಚಿವ
ಪ್ರೀತಿ ವಿಶ್ವಾಸವನ್ನು ರಾಜಕಾರಣಿಗಳು ಕೆಡಿಸಲು ಏಕಿಷ್ಟು ಆತುರರಾಗಿದ್ದಾರೆ ಎನ್ನುವುದು ಅರ್ಥವಾಯಿತು.

ನನ್ನ ಬಳಿ ಸಾಕಷ್ಟು ಸೀಡಿಗಳಿವೆ. ಆದರೆ ಅದರಿಂದ ಇನ್ನೊಬ್ಬರ ವೈಯಕ್ತಿಕ ಜೀವನ ಹಾಳಾಗಬಾರದು ಎಂದು ಬಿಡುಗಡೆ ಮಾಡುತ್ತಿಲ್ಲ- ರಮೇಶ್ ಜಾರಕಿ ಹೊಳಿ, ಮಾಜಿ ಸಚಿವ
ಹಾಳಾಗುವುದಕ್ಕೆ ಏನೂ ಉಳಿದಿಲ್ಲ ಎಂದು ನಿಮ್ಮ ಅಶ್ಲೀಲ ಸಿಡಿ ಬಿಡುಗಡೆ ಮಾಡಿರಬೇಕು.

ಮನೆ ಯಜಮಾನಿಗೆ ಎರಡು ಸಾವಿರ ರೂ. ನೀಡುವ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಅತ್ತೆ-ಸೊಸೆಯಂದಿರ ನಡುವೆ ಜಗಳಕ್ಕೆ ಕಾರಣವಾಗಲಿದೆ - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನಿಮ್ಮ ಮನೆಯ ಅತ್ತೆ ಸೊಸೆಯರಂತೆ ಎಲ್ಲರ ಮನೆಯವರು ಇರಬೇಕಾಗಿಲ್ಲ.

ಗೆಲ್ಲುವ ಪಕ್ಷದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಇರುವುದು ಸಹಜ - ಬಸವರಾಜ ಬೊಮ್ಮಾಯಿ, ಸಿಎಂ
ಶೇ.40 ಕಮಿಷನ್ ಪಕ್ಷದಲ್ಲಿ ಗೆದ್ದರೆ ಹೆಚ್ಚು ಲಾಭ ಎಂದು ಟಿಕೆಟ್ ಆಕಾಂಕ್ಷಿಗಳು ಪೈಪೋಟಿಗಿಳಿದಿರಬೇಕು.

ಮುಂದಿನ ವರ್ಷ 9,10ನೇ ತರಗತಿಗಳಿಗೂ ಮೊಟ್ಟೆ ನೀಡಲು ನಿರ್ಧರಿಸಲಾಗಿದೆ - ಬಿ.ಸಿ.ನಾಗೇಶ್, ಸಚಿವ
ರಾಜಕಾರಣಿಗಳು ತಿಂದು ಉಳಿದರೆ ಮಾತ್ರ.

ಕಾಂಗ್ರೆಸ್‌ನಲ್ಲಿ ಸಂಸ್ಕಾರವಿಲ್ಲದ ವ್ಯಕ್ತಿಗಳಿದ್ದಾರೆ- ಶ್ರೀರಾಮುಲು, ಸಚಿವ
ಬಿಜೆಪಿಯಲ್ಲಿ ಸಂಸ್ಕಾರ ಇದ್ದ ವ್ಯಕ್ತಿಗಳು ಇಲ್ಲ ಎನ್ನುವುದು ಆರೋಪ.

ಮದುವೆ ಎನ್ನುವುದು ದೈಹಿಕ ಹಾಗೂ ಮಾನಸಿಕ ಮೋಜಿನ ಕ್ರಿಯೆಯಲ್ಲ, ಅದೊಂದು ಪವಿತ್ರ ಬಾಂಧವ್ಯ ಹಾಗೂ ಸಂಸ್ಕಾರ - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಪ್ರ.ಕಾರ್ಯದರ್ಶಿ
ಆರೆಸ್ಸೆಸ್ ಸೇರುವುದೇ ಮದುವೆ ಆಗದೆ ಮೋಜು ಮಾಡುವುದಕ್ಕೆ ಇರಬೇಕು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X