ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಗಾಗಿ ಮುಂದುವರಿದ ಪೊಲೀಸರ ಬೇಟೆ, ನಾಲ್ವರು ಸಹಚರರ ಬಂಧನ
ಹೊಸದಿಲ್ಲಿ: ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಗಾಗಿ ಪೊಲೀಸರ ಹುಡುಕಾಟ 3 ನೇ ದಿನಕ್ಕೆ ಕಾಲಿಟ್ಟಿದ್ದು, ಆತನ ಚಿಕ್ಕಪ್ಪ ಹಾಗೂ ಚಾಲಕ ಇಂದು ಶರಣಾಗಿದ್ದಾರೆ. ಆತನ ಚಿಕ್ಕಪ್ಪ ಹರಿಜಿತ್ ಸಿಂಗ್ ಹಾಗೂ ಚಾಲಕ ಹರ್‌ಪ್ರೀತ್ ಪಂಜಾಬ್‌ನ ಮೆಹತ್‌ಪುರ್ ನಲ್ಲಿದ್ದರು.
ಪೊಲೀಸರು ಶನಿವಾರ ಖಾಲಿಸ್ತಾನಿ ನಾಯಕ ಹಾಗೂ ಆತನ ಸಹಾಯಕರನ್ನು ಬೆನ್ನಟ್ಟುತ್ತಿದ್ದಾಗ ಅಮೃತಪಾಲ್ ಸಿಂಗ್ ಚಿಕ್ಕಪ್ಪ ಹರಿಜಿತ್ ಸಿಂಗ್ ಅವರು ಮರ್ಸಿಡಿಸ್ ಕಾರನ್ನು ಓಡಿಸುತ್ತಿದ್ದರು. 15-16 ಕಿಲೋಮೀಟರ್ ಪೊಲೀಸರ ಚೇಸಿಂಗ್ ಸಮಯದಲ್ಲಿ ತಾನು ಹಾಗೂ ಅಮೃತಪಾಲ್ ಬೇರ್ಪಟ್ಟೆವು ಎಂದು ಹರಿಜಿತ್ ಸಿಂಗ್ ಹೇಳಿದ್ದಾರೆ.
ಅಮೃತಪಾಲ್ ಸಿಂಗ್ ನ ನಾಲ್ವರು ಪ್ರಮುಖ ಸಹಾಯಕರನ್ನುಬಂಧಿಸಲಾಗಿದ್ದು, ನಾಲ್ವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಇಲ್ಲಿಯವರೆಗೆ ಪೊಲೀಸರು ಅಮೃತಪಾಲ್ ಸಿಂಗ್ ಅವರ 112 ಸಹಚರರನ್ನು ಬಂಧಿಸಿದ್ದಾರೆ. ಅವರಲ್ಲಿ 34 ರವಿವಾರ.ಬಂಧಿಸಲಾಗಿದೆ. 'ವಾರಿಸ್ ಪಂಜಾಬ್ ದೇ' ಗುಂಪಿನ ಹಲವಾರು ಸದಸ್ಯರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಬಂಧಿತರಲ್ಲಿ ಅಮೃತಪಾಲ್ ಸಿಂಗ್ ಅವರ ಹಣಕಾಸು ನಿರ್ವಹಣೆ ಮಾಡುವ ವ್ಯಕ್ತಿ ದಲ್ಜೀತ್ ಸಿಂಗ್ ಕಲ್ಸಿ ಸೇರಿದ್ದಾರೆ.