ಉಳ್ಳಾಲ: ದರ್ಗಾ ಸಮಿತಿಯಿಂದ ಖಾಝಿ ಕೂರತ್ ತಂಙಳ್ರಿಗೆ ಸ್ವಾಗತ

ಉಳ್ಳಾಲ: ಉಳ್ಳಾಲ ದರ್ಗಾ ನೂತನ ಸಮಿತಿ ವತಿಯಿಂದ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ರಿಗೆ ಸ್ವಾಗತ ಸಮಾರಂಭವು ರವಿವಾರ ನಡೆಯಿತು. ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಖಾಝಿಯವರನ್ನು ಬರ ಮಾಡಿಕೊಂಡ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ, ಸಮಿತಿಯ ಸದಸ್ಯರು ಹಾಗೂ ಊರವರು ದಫ್ ಮೂಲಕ ಅವರನ್ನು ದರ್ಗಾಕ್ಕೆ ಕರೆತಂದರು.
ಈ ವೇಳೆ ಮಾತನಾಡಿದ ಕೂರತ್ ತಂಙಳ್, ಮಸೀದಿಯ ಕಾರ್ಯ ಚಟುವಟಿಕೆ ಖಾಝಿಯವರ ಗಮನಕ್ಕೆ ತಾರದೇ ಮಾಡುವಂತಿಲ್ಲ. ಈ ಬಗ್ಗೆ ನಿಯಮ ಪಾಲನೆ ಅಗತ್ಯ ಎಂದರು.
ಈ ವೇಳೆ ದರ್ಗಾ ಸಮಿತಿಯ ಉಪಾಧ್ಯಕ್ಷರಾದ ಯು.ಎಂ.ಅಶ್ರಫ್ ಅಹ್ಮದ್ ರೈಟ್ವೇ, ಹಸೈನಾರ್ ಕೋಟೆಪುರ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಶಿಹಾಬುದ್ದೀನ್ ಸಖಾಫಿ, ಜೊತೆ ಕಾರ್ಯದರ್ಶಿ ಇಸಾಕ್ ಮೇಲಂಗಡಿ, ಮುಸ್ತಫ ಮದನಿ ನಗರ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಲೆಕ್ಕ ಪರಿಶೋಧಕ ಫಾರೂಕ್ ಯು.ಎಚ್. ಕಲ್ಲಾಪು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Next Story