ಔರಂಗಾಬಾದ್ ಎಂದು ನಾಮಫಲಕದಲ್ಲಿದುದಕ್ಕೆ ಮಹಿಳಾ ಶೌಚಾಲಯದ ಮೇಲೆ ಹತ್ತಿ ದಾಂಧಲೆಗೈದ ಹಿಂದುತ್ವ ಕಾರ್ಯಕರ್ತರು
ಔರಂಗಾಬಾದ್: ಹೆಸರು ಬದಲಾವಣೆಯ ಪರ್ವ ದೇಶದೆಲ್ಲಡೆ ಹೆಚ್ಚಾಗುತ್ತಿರುವಂತೆಯೇ ಔರಂಗಾಬಾದ್ ಹೆಸರನ್ನು ಬದಲಾಯಿಸುವ ಕುರಿತು ಹಲವಾರು ಹೇಳಿಕೆಗಳು ಕೇಳಿ ಬಂದಿತ್ತು. ಇದೀಗ ನಾಮಫಲಕದಲ್ಲಿ ಔರಂಗಾಬಾದ್ ಎಂದು ಇದ್ದುದಕ್ಕೆ ಮಹಿಳಾ ಶೌಚಾಲಯದ ಮೇಲೆ ಹತ್ತಿದ ಹಿಂದುತ್ವ ಕಾರ್ಯಕರ್ತರು ದಾಂಧಲೆಗೈದಿದ್ದಾರೆನ್ನಲಾದ ಘಟನೆ ನಡೆದಿದೆ. ಈ ಸಂಬಂಧ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಹಲವಾರು ಹಿಂದುತ್ವ ಕಾರ್ಯಕರ್ತರು ಮಹಿಳಾ ಶೌಚಾಲಯದ ಮೇಲೆ ಹತ್ತಿ ದಾಂಧಲೆಗೈಯುವ ವೀಡಿಯೊವನ್ನು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಹಂಚಿಕೊಂಡಿದ್ದಾರೆ. ರಾಷ್ಟ್ರೀಯವಾದಿಗಳ ಇಂತಹಾ ಧೈರ್ಯವಂತ ಕೃತ್ಯವನ್ನು ಯಾವ ಮಾಧ್ಯಮಗಳು ವರದಿ ಮಾಡಿವೆ? ಎಂದು ಅವರು ಪ್ರಶ್ನಿಸಿದ್ದಾರೆ.
How many News Agencies and News Channels have covered this brave act of Nationalists climbing a public Women's washroom to break the signboard which had #Aurangabad written on it.pic.twitter.com/PAXceB6WQK
— Mohammed Zubair (@zoo_bear) March 20, 2023