ಮೂಡಿಗೆರೆ: ಅಪರಿಚಿತ ವಾಹನಕ್ಕೆ ಸಿಲುಕಿ 'ಹುಲಿ ಬೆಕ್ಕು' ಸಾವು
ಮೂಡಿಗೆರೆ, ಮಾ.20: ತಾಲೂಕಿನ ಹೊರವಲಯದ ಕೊಲ್ಲಿಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 173ಯಲ್ಲಿ ಅಪರಿಚಿತ ವಾಹನವೊಂದಕ್ಕೆ ಸೋಮವಾರ ಹುಲಿ ಬೆಕ್ಕು ಸಿಲುಕಿ ಮೃತಪಟ್ಟಿದೆ.
ಘಟನೆ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ ವೇಳೆ ರಸ್ತೆ ದಾಟುತ್ತಿದ್ದಾಗ ಅಪರಿಚತ ವಾಹನ ಢಿಕ್ಕಿ ಹೊಡೆದ ಪರಿಣಾಮ ಅಪರೂಪದ ಹುಲಿ ಬೆಕ್ಕು ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ಆರ್ಥಿಕ ನೆರವು: 4ನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
Next Story