ಲೈಂಗಿಕ ಕಿರುಕುಳ ಆರೋಪ: ಬೆಂಗಳೂರಿನಲ್ಲಿ ಕನ್ಯಾಕುಮಾರಿಯ ಚರ್ಚ್ ಪಾದ್ರಿ ಸೆರೆ
ಬೆಂಗಳೂರು, ಮಾ.20: ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದೃಶ್ಯ ಬಹಿರಂಗ ಬೆನ್ನಲ್ಲೇ ನಾಪತ್ತೆಯಾಗಿದ್ದ ಇಲ್ಲಿನ ತಮಿಳುನಾಡಿನ ಕನ್ಯಾಕುಮಾರಿ ಚರ್ಚ್‍ನ ಪಾದ್ರಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ತಾಕಳಾ ಚರ್ಚ್‍ನ 29 ವರ್ಷದ ಯುವ ಪಾದ್ರಿ ಬೆನ್ಡಿಕ್ಟ್ ಆಂಟೊ ಎಂಬಾತನನ್ನು ಬೆಂಗಳೂರು ಪೊಲೀಸರ ಸಹಾಯದಿಂದ ಕನ್ಯಾಕುಮಾರಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬೆನ್ಡಿಕ್ಟ್ ಆಂಟೊ ಲ್ಯಾಪ್‍ಟಾಪ್‍ನಿಂದ ಆಸ್ಟಿನ್ ಎನ್ನುವ ಸ್ನೇಹಿತನೊಬ್ಬ ಅವರ ಖಾಸಗಿ ವಿಡಿಯೊ ಮತ್ತು ಫೋಟೊಗಳನ್ನು ಕದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇಬ್ಬರ ವಿರುದ್ಧ ಸಂತ್ರಸ್ತ ಯುವತಿ ನಾಗರ್‍ಕೋಯಿಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಬೆಳಕಿಗೆ ಬಂದ ಮೇಲೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬೆನ್ಡಿಕ್ಟ್ ಆಂಟೊನನ್ನು ಕನ್ಯಾಕುಮಾರಿ ಪೊಲೀಸರು ಬಂಧಿಸಿದ್ದಾರೆ.
Next Story