ಉಡುಪಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ

ಉಡುಪಿ, ಮಾ.20: ಆನ್ಲೈನ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಧವಿ ಎಂಬವರು ಉದ್ಯೋಗ ಹುಡುಕಾಟದಲ್ಲಿದ್ದಾಗ ಮಾ.15ರಂದು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿ ಆನ್ಲೈನ್ನಲ್ಲಿ ಪಾರ್ಟ್ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದನು. ಆತ ಮಾಧವಿ ಅವರಿಗೆ ಕೆಲವೊಂದು ಆನ್ಲೈನ್ ಟಾಸ್ಕ್ ನೀಡಿ, ಹಣ ಪಾವತಿಸುವಂತೆ ತಿಳಿಸಿದನು.
ಅದರಂತೆ ಮಾಧವಿ ಮಾ.15ರಿಂದ ಮಾ.20ರವರೆಗೆ ಒಟ್ಟು 2,52,600ರೂ. ಹಣವನ್ನು ಆರೋಪಿಯ ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದರು. ಆದರೆ ಆರೋಪಿ ಇವರಿಗೆ ಉದ್ಯೋಗ ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story