ಪಿ.ಎ. ಕಾಲೇಜಿನಲ್ಲಿ ಅಡುಗೆ ಕೌಶಲ್ಯ ಕಾರ್ಯಾಗಾರ
ಕೊಣಾಜೆ: ಪಿ. ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ಅಡುಗೆ ಕೌಶಲ್ಯ ಕಾರ್ಯಾಗಾರವು ಐ.ಕ್ಯೂ.ಎ.ಸಿ, ಮಹಿಳಾ ಸಂಘದ ಸಹಯೋಗದೊಂದಿಗೆ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬೆಸೆಂಟ್ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕಿ ಅವರು ಭಾಗವಹಿಸಿ ಮಾತನಾಡಿ, ಅಡುಗೆಯ ಕಲೆಗಾರಿಕೆ, ಕೌಶಲ್ಯಗಳು ನಮ್ಮ ಜೀವನದಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಈ ಬಗ್ಗೆ ಅರಿವನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಾಗಾರ ಅನುಕೂಲವಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಸರ್ಫಾಝ್ ಜೆ. ಹಾಸಿಂ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮ ದಲ್ಲಿ ಕಾಲೇಜಿನ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಹೇಮಲತ ಸ್ವಾಗತಿಸಿ, ಹರ್ಷಿನಿ ವಂದಿಸಿದರು.
Next Story