ಮಂಗಳೂರು: ಕೋರ್ಟ್ ರಸ್ತೆಯಲ್ಲಿ ಕಾರು ಪಲ್ಟಿ

ಮಂಗಳೂರು: ಕಾರನ್ನು ರಿವರ್ಸ್ ತೆಗೆಯುವ ವೇಳೆ ಆಕ್ಸಿಲೇಟರ್ ಪೆಡಲ್ ಮಧ್ಯೆ ಚಾಲಕನ ಚಪ್ಪಲಿ ಸಿಲುಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಗರದ ಜಿಲ್ಲಾ ನ್ಯಾಯಾಲಯದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಜಿಲ್ಲಾ ನ್ಯಾಯಾಲಯದ ಮುಂಭಾಗದಲ್ಲಿ ನಿಲ್ಲಿಸಿದ ಕಾರನ್ನು ಚಾಲಕ ರಿವರ್ಸ್ ತೆಗೆಯುತ್ತಿದ್ದರು. ಈ ಮಧ್ಯೆ ಆಕ್ಸಿಲೇಟರ್ ಪೆಡಲ್ ಮಧ್ಯೆ ಚಪ್ಪಲಿ ಸಿಲುಕಿ ಕಾರು ನಿಯಂತ್ರಣ ತಪ್ಪಿ ಹಿಂಭಾಗದ ಇಳಿಜಾರು ಗುಡ್ಡಪ್ರದೇಶಕ್ಕೆ ಪಲ್ಟಿಯಾಗಿ ಕೆಳಭಾಗದಲ್ಲಿರುವ ಕೋರ್ಟ್- ಕರಂಗಲ್ಪಾಡಿ ರಸ್ತೆಗೆ ಬಿದ್ದಿದೆ. ಇದರಿಂದ ಕಾರು ಚಾಲಕನಿಗೆ ಗಾಯವಾಗಿದೆ. ಅಲ್ಲದೆ ಕೆಳಭಾಗದಲ್ಲಿ ಆಟೋ ಹಾಗೂ ಮತ್ತೊಂದು ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಆಗಮಿಸಿ ಕಾರನ್ನು ಕ್ರೇನ್ ಬಳಸಿ ತೆರವು ಮಾಡಿದ್ದಾರೆ.

Next Story