'ಬೋಧಿವೃಕ್ಷ' ಮತ್ತು 'ಬೋಧಿವರ್ಧನ' ಪ್ರಶಸ್ತಿ: ಪ್ರಸ್ತಾವನೆಗೆ ಅರ್ಜಿ ಆಹ್ವಾನ
ಬೆಂಗಳೂರು: 'ಸ್ಫೂರ್ತಿಧಾಮ'ವನ್ನು ನಿರ್ವಹಿಸುತ್ತಿರುವ 'ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್' ಎಪ್ರಿಲ್ 14, 2023ರಂದು ನಡೆಯಲಿರುವ ಅಂಬೇಡ್ಕರ್ ಹಬ್ಬದಲ್ಲಿ ನೀಡಲಾಗುವ 'ಬೋಧಿವೃಕ್ಷ' ಮತ್ತು 'ಬೋಧಿವರ್ಧನ' ಪ್ರಶಸ್ತಿಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ಹಲವು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಹಬ್ಬ'ವಾಗಿ ಆಚರಿಸಿಕೊಂಡು ಬರುತ್ತಿರುವ 'ಸ್ಫೂರ್ತಿಧಾಮ', ಇದೇ ಸಂದರ್ಭದಲ್ಲಿ ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ಒಂದು ಬೋಧಿವೃಕ್ಷ' ಮತ್ತು ಐದು 'ಬೋಧಿವರ್ಧನ' ಪ್ರಶಸ್ತಿಗಳನ್ನು ನೀಡುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
'ಬೋಧಿವೃಕ್ಷ' ಪ್ರಶಸ್ತಿಗೆ ಒಂದು ಲಕ್ಷ ರೂ. ನಗದು ಮತ್ತು 'ಬೋಧಿವರ್ಧನೆ ಪ್ರಶಸ್ತಿಗೆ ತಲಾ ಇಪ್ಪತೈದು ಸಾವಿರ ರೂ. ನಿಗದಿಯಾಗಿದೆ.
ಈ ಪ್ರಶಸ್ತಿಗಳು ಹಲವು ಕಾರಣಗಳಿಗಾಗಿ ವಿಭಿನ್ನವಾದವೂ ಹೌದು, ವಿಶಿಷ್ಟವಾದವೂ ಹೌದು. ನಮ್ಮಲ್ಲಿ ರಾಷ್ಟ್ರ, ಮತ್ತು ರಾಜ್ಯಮಟ್ಟದ ಸರ್ಕಾರಿ, ಅರೆಸರ್ಕಾರಿ, ಪ್ರತಿಷ್ಠಿತ ಅಕಾಡೆಮಿಗಳು, ಸಂಘ-ಸಂಸ್ಥೆಗಳು ಕೊಡುವ ಅನೇಕ ಪ್ರಶಸ್ತಿಗಳಿವೆ. ಆದರೆ, ಆರ್ಥಿಕ, ಸಾಮಾಜಿಕ, ರಾಜಕೀಯ ಅಥವ ಶೈಕ್ಷಣಿಕ ಬಂಡವಾಳವಿಲ್ಲದೆ ತಳಸ್ತರದವರ ಬದುಕನ್ನು ಗುಣಾತ್ಮಕವಾಗಿ ವಿಸ್ತರಿಸುವ ಕಾವ್ಯದಲ್ಲಿ ತೊಡಗಿಕೊಂಡಿರುವವರನ್ನು ಗೌರವಿಸುವ ಪ್ರಶಸ್ತಿಗಳು ನಮ್ಮಲ್ಲಿಲ್ಲ. ಸಮಾಜದೊಂದಿಗೆ ಇಂಥ ಸಾವಯವ ಸಂಬಂಧವನ್ನು ಸ್ಥಾಪಿಸಿಕೊಂಡವರನ್ನು ಸನ್ಮಾನಿಸುವ ಮೂಲಕ 'ಸ್ಫೂರ್ತಿಧಾಮ' ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ..
ಇಂಥವರು ನಿಮಗೆ ತಿಳಿದಿದ್ದರೆ, ದಯವಿಟ್ಟು ನಮಗೆ ಅವರ ಬಗ್ಗೆ ಪೂರ್ಣಮಾಹಿತಿಯನ್ನು ನೀಡಿ ಅಥವಾ ನೀವೇ ಅಂಥವರಾಗಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗಾಗಿ ಸ್ಫೂರ್ತಿಧಾಮ, ಅಂಜನಾನಗರ, ಮಾಗಡಿ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು-560 091 e-mail: spoorthidhama1992@gmail.com ಅಥವಾ ಮೊಬೈಲ್ ಸಂಖ್ಯೆ 9108830438, 9108830437 ಯನ್ನು ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ.