'ಬೋಧಿವೃಕ್ಷ', 'ಬೋಧಿವರ್ಧನ' ಪ್ರಶಸ್ತಿಗಾಗಿ ಪ್ರಸ್ತಾವನೆಗಳ ಆಹ್ವಾನ
ಬೆಂಗಳೂರು, ಮಾ.22: ಬೆಂಗಳೂರಿನ 'ಸ್ಫೂರ್ತಿಧಾಮ'ವನ್ನು ನಿರ್ವಹಿಸುತ್ತಿರುವ 'ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಎಪ್ರಿಲ್ 14ರಂದು ನಡೆಯಲಿರುವ 'ಅಂಬೇಡ್ಕರ್ ಹಬ್ಬ'ದಲ್ಲಿ ನೀಡಲಾಗುವ 'ಬೋಧಿವೃಕ್ಷ' ಮತ್ತು 'ಬೋಧಿವರ್ಧನ' ಪ್ರಶಸ್ತಿಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಹಲವು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು 'ಅಂಬೇಡ್ಕರ್ ಹಬ್ಬ'ವಾಗಿ ಆಚರಿಸಿಕೊಂಡು ಬರುತ್ತಿರುವ 'ಸ್ಫೂರ್ತಿಧಾಮ', ಇದೇ ಸಂದರ್ಭದಲ್ಲಿ ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ಒಂದು 'ಬೋಧಿವೃಕ್ಷ' ಮತ್ತು ಐದು 'ಬೋಧಿವರ್ಧನ' ಪ್ರಶಸ್ತಿಗಳನ್ನು ನೀಡುತ್ತಿದೆ. 'ಬೋಧಿವೃಕ್ಷ' ಪ್ರಶಸ್ತಿಗೆ ಒಂದು ಲಕ್ಷ ರೂ. ನಗದು ಮತ್ತು 'ಬೋಧಿವರ್ಧನ ಪ್ರಶಸ್ತಿಗೆ ತಲಾ ಇಪ್ಪತ್ತೈದು ಸಾವಿರ ರೂ. ನೀಡಲಾಗುತ್ತದೆ.
ಆರ್ಥಿಕ, ಸಾಮಾಜಿಕ, ರಾಜಕೀಯ ಅಥವ ಶೈಕ್ಷಣಿಕ ಬಂಡವಾಳವಿಲ್ಲದೆ ತಳಸ್ತರದವರ ಬದುಕನ್ನು ಗುಣಾತ್ಮಕವಾಗಿ ವಿಸ್ತರಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಅಂತಹ ಅರ್ಹರು ಅಥವಾ ಅರ್ಹರ ಬಗ್ಗೆ ಮಾಹಿತಿಯಿದ್ದಲ್ಲಿ ಪೂರ್ಣ ವಿವರಗಳೊಂದಿಗೆ ಮಾ.321ರೊಳಗೆ ಸ್ಫೂರ್ತಿಧಾಮ, ಅಂಜನಾನಗರ, ಮಾಗಡಿ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು-560 091 ಇಲ್ಲಿಗೆ ಮಾಹಿತಿ ಮಾಹಿತಿ ನೀಡಬಹುದು. ಅಥವಾ ಇ ಮೇಲ್: spoorthidhama1992@gmail.comಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ Ph: +91 91088 30438 | +91 9108830437ಕ್ಕೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.