ಖಾಲಿಸ್ತಾನ್ ನಾಯಕ ಅಮೃತ್‌ಪಾಲ್ ಪರಾರಿಯಾಗಿದ್ದ ಬೈಕ್ ಪತ್ತೆಹಚ್ಚಿದ ಪೊಲೀಸರು

ಹೊಸದಿಲ್ಲಿ: ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಶನಿವಾರ ಪರಾರಿಯಾಗಿದ್ದ ಮೋಟಾರ್‌ಸೈಕಲ್ ಅನ್ನು ಪಂಜಾಬ್ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೃತ್ ಪಾಲ್ ಗಾಗಿನ ಹುಡುಕಾಟ ಸದ್ಯ 5 ನೇ ದಿನಕ್ಕೆ ಕಾಲಿಟ್ಟಿದೆ.
ಬಜಾಜ್ ಪ್ಲಾಟಿನಾ ಬೈಕ್ ಜಲಂಧರ್ ನಗರದಿಂದ 45 ಕಿ.ಮೀ ದೂರದಲ್ಲಿರುವ ಜಲಂಧರ್‌ನ ದಾರಾಪುರ ಪ್ರದೇಶದ ಕಾಲುವೆಯೊಂದರ ಬಳಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಂಗ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದಾರೆ ಮತ್ತು ಪರಾರಿಯಾದವರನ್ನು ಹಿಡಿಯಲು ಸಾರ್ವಜನಿಕ ಸಹಾಯವನ್ನು ಪಡೆಯಲು ಆತ ಪೇಟ ಧರಿಸದ ಕೆಲವು ಚಿತ್ರಗಳು ಸೇರಿದಂತೆ ಖಾಲಿಸ್ತಾನ್ ಬೆಂಬಲಿಗನ ಏಳು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದರು.
ಅವರು ಆರಂಭದಲ್ಲಿ ತಮ್ಮ ಮರ್ಸಿಡಿಸ್ ವಾಹನದಲ್ಲಿದ್ದ ಆತ ನಂತರ ಪೋಲೀಸ್ ಬೆನ್ನುಹತ್ತಿದ ಸಮಯದಲ್ಲಿ ಬ್ರೆಝಾ SUV ಗೆ ಬದಲಾಯಿಸಿದ್ದ. ಬಳಿಕ ದ್ವಿಚಕ್ರ ವಾಹನದ ಮೂಲಕ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
Next Story